Tuesday, July 27, 2010

ಗಜಲ್

ಗಜಲ್


ಅಪನೆ ಹಿ ದಿಲ್ ನೆ ಹಂ ಸೆ ಬಗಾವತ್ ಕಿಯಾ
ಬಿನಾ ಇಜಾಜತ್ ಉನ್ ಸೆ ಪ್ಯಾರ್ ಕಿಯಾ
ಕೋಸೆ ತೊ ಕಿಸೆ ಕೋಸೆ ಖಡೆ ಹಂ ತೊ
ಜಹರೀಲಿ ಹುಸ್ನ್ ನೆ ಹಮಾರೀ ಮಾತಮ್ ಕಿಯಾ


ಬಡತೀ ರಾತ್ ಮೆ ಖುಲೆ ಮೈಖಾನೆ ಕಹಾಂ ಡೂಂಢೆ
ದರ್ ದರ್ ಫಿರ್ ಕೆ ಆತೇ ಥೆ ಕದಮೋ ತಲೆ ತೇರೆ
ತೇರೀ ನಶೀಲಿ ಆಂಖೆ ಪಿಲಾತೀ ಥಿ ಇಸ್ ಕದರ್ ಜಾಮ್ ಹಂ ಕೊ
ಶರಾಬೀ ಬನಾಕೆ ಛೋಡಾ ಹೈ ತೂನೆ, ಐಸಾ ಹಂ ನೆ ಕ್ಯಾ ಕಿಯಾ


ಮುಸ್ಕುರಾನೆ ಸೆ ಪೆಹಲೆ ಸೋಚ್ ಲಿಯಾ ಹೋತಾ
ದಿಲ್ ಜಲಾನೇ ಸೆ ಪೆಹಲೆ ಪೂಛ್ ಲಿಯಾ ಹೋತಾ
ಅಶ್ಕೋಂಕೆ ಆಗ್ ಜೋ ಸೀನೇ ಮೆ ಜಲ್ ರಹೀ ಹೈ
ಸುಲಝತೆ ಅರಮಾನೋ ಸೆ ಖಿಲವಾಡ್ ಆಖಿರ್ ಕ್ಯೋ ಕಿಯಾ


ಅಂಧೇರೆ ಕೆ ಎಹಸಾನ್ ಮೆ ಹಿ ರೆಹನೇದೆ ಹಮೆ ಸಾಗರಿ,
ಸಚ್ಚೆ ಪ್ಯಾರ್ ಕಾ ಖೂಬ್ ಇನಾಮ್ ಮಿಲಾ
ಯೂ ದಿಲ್ ತೊ ಹಜಾರೋ ಲಗಾತೆ ಹೋಂಗೆ ಉನ್ ಸೆ
ಬದನಸೀಬೊ ವಾಲೊ ಮೆ ಓ ಹಮೆ ಭಿ ಶಾಮಿಲ್ ಕಿಯಾ


ಗಜಲ್ ಎಂದರೆ..
"ಸ್ತ್ರೀಯೊಂದಿಗಿನ ಸಂಭಾಷಣೆ" ಎಂದು. ಗಜಲ್ ನಲ್ಲಿರುವ ಪ್ರತಿಯೊಂದು ಶೇರ್(ಎರಡು ಅಥವಾ ನಾಲ್ಕು ಸಾಲಿನ ಗುಂಪು)ತನ್ನಷ್ಟಕ್ಕೆ ತಾನೇ ಪರಿಪೂರ್ಣವಿದ್ದು, ಅದು ಹಿಂದಿನ ಇಲ್ಲವೇ ಮುಂದಿನ ಶೇರ್ ನೊಂದಿಗೆ ಯಾವುದೇ ತರದ ಸಂಬಂಧವನ್ನು ಇಟ್ಟುಕೊಂಡಿರುವುದಿಲ್ಲ. ಅವೆಲ್ಲ ಯಾವ ರೀತಿಯಿಂದಲಾದರೂ ಪರಸ್ಪರ ಹೊಂದಿಕೊಂಡಿದ್ದರೆ ಅದು ಕೇವಲ ಅಂತ್ಯಪ್ರಾಸದ ಮೂಲಕ.
ತಾಂತ್ರಿಕವಾಗಿ ಹೆಳಬೇಕೆಂದರೆ ಗಜಲ್ ನಲ್ಲಿ(ಎರಡು ಸಾಲಿನ ಗಜಲ್ ನಲ್ಲಿ) ಮೊದಲಿನ ಎರಡು ಪಂಕ್ತಿಗಳು ಸಮಪ್ರಾಸವುಳ್ಳದ್ದಾಗಿದ್ದು, ಅವು ಆರಂಭವನ್ನು ಸೂಚಿಸುವುದರಿಂದ ಆ ಪಂಕ್ತಿ ಗುಂಪಿಗೆ ಅಥವಾ ಮೊದಲಿನ ಶೇರ್ ಗೆ "ಮತ್ಲ ಅ" ಎನ್ನುತ್ತಾರೆ.ಮುಂದಿನ ಶೇರ್ ಗಳ ಪ್ರತಿ ಎರಡನೆಯ ಪಂಕ್ತಿಯು ಮೊದಲಿನ ಶೇರ್ ನ ಪ್ರಾಸವನ್ನು ಹೊಂದಿರುತ್ತದೆ. ಕೊನೆಯ ಶೇರ್ ಗಜಲ್ ನ ಮುಕ್ತಾಯವನ್ನು ಸೂಚಿಸುವುದರಿಂದ ಅದಕ್ಕೆ"ಮಕ್ತ ಅ" ಎನ್ನುತ್ತಾರೆ. ಗಜಲ್ ಕಾರನು ಮಕ್ತ ಅ ದಲ್ಲಿ ತನ್ನ ಹೆಸರನ್ನು ಇಲ್ಲವೆ ಕಾವ್ಯನಾಮವನ್ನು ಉಪಯೋಗಿಸುವುದು ಸರ್ವೇಸಾಮಾನ್ಯವಾಗಿದೆ.


ಗಜಲ್ ಬರೆಯುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಇಲ್ಲಿ ವ್ಯಾಕರಣದ ಇಲ್ಲವೆ ಗಜಲ್ ನ ಯಾವುದೇ ತಾಂತ್ರಿಕ ದೋಷವಿದ್ದರೂ ದಯವಿಟ್ಟು ತಿಳಿಸಿ, ತಿದ್ದುಕೊಳ್ಳಲು ಬಯಸುತ್ತೇನೆ. ಹಿಂದಿಯಲ್ಲಿ ಸರಿಯಾಗಿ type ಮಾಡಲು ತೊಂದರೆ ಎನ್ನಿಸಿ(ಉದಾ: ಇಜಾಜತ್ ಅನ್ನು ಹಿಂದಿಯಲ್ಲಿ इजाजत ಬರೆಯಲು ज ಕೆಳಗೆ ಒಂದು ಚುಕ್ಕೆಯ ಅವಶ್ಯಕತೆ ಇದ್ದು ಅಂಥವನ್ನೆಲ್ಲ ಹೇಗೆ type ಮಾಡುವುದು ಎಂದು ತಿಳಿಯದೆ ಕನ್ನಡ ಲಿಪಿಯನ್ನೇ ಬಳಸಿದ್ದೇನೆ, ಮತ್ತು ಇಂತಹ ತೊಂದರೆಯನ್ನು ಕನ್ನಡ ಲಿಪಿ ಬಳಸುವಾಗಲೂ ಕಂಡಿದ್ದೇನೆ)
ಧನ್ಯವಾದಗಳು
.

26 comments:

ಚುಕ್ಕಿಚಿತ್ತಾರ said...

ಚನ್ನಾಗಿದೆ. ಚ೦ದದ ಗಜಲ್ ರಚಿಸಿದ ಸಾಗರಿಯವರಿಗೆ ಖೂಬ್ ಇನಾಮ್ ಕೊಡಲೇ ಬೇಕು...!
ನನಗೆ ಹಿ೦ದಿ ಗ್ರಾಮರ್ ಗೊತ್ತಿಲ್ಲ.. ಹಾಗಾಗಿ ತಪ್ಪು ಇದ್ದರೆ ಗೊತ್ತಾಗ್ತಾ ಇಲ್ಲಾರೀ...

Dr.D.T.Krishna Murthy. said...

ಸಾಗರಿಯವರೇ;ಒಳ್ಳೆಯ ಗಜಲ್ ಗಳು.ಚೆನ್ನಾಗಿವೆ.ನೀವು ಕನ್ನಡದಲ್ಲೂ ಗಜಲ್ ಬರೆಯುವ ಪ್ರಯತ್ನ ಮಾಡಬಹುದು.ಈ ದಿಶೆಯಲ್ಲಿ ಸನ್ಮಾನ್ಯ ಶಾಂತರಸ,ಶ್ರೀಮತಿ ಮುಕ್ತಾಯಕ್ಕ ಮೊದಲಾದವರು ಕನ್ನಡದಲ್ಲಿ ಗಜಲ್ ಗಳನ್ನು ಬರೆದ ಖ್ಯಾತರು.ಧನ್ಯವಾದಗಳು.

Ittigecement said...

ಸಾಗರಿ...

ವಾಹ್.. ಕ್ಯಾ ಬಾತ್ ಹೈ.. !!

ಮೈ ತೊ.. ಖೂಬ್ ಮಜಾ ಉಠಾಯಾ.. !

ಆಪ್ ಐಸಾ ಹಿ.. ಲಿಖತೆ ರೆಹೆನಾ..!

ಆಪ್ ಕಾ ಗಝಲ್ ಕೊ ಹಮಾರಾ ಸಲಾಮ್.. !

shridhar said...

ಸಾಗರಿ ಬ್ಲೊಗ್ ಒಡತಿಯವರೇ,
ಆಪ್ಕ ಯೆ ಗಜಲ್ ಹಮೇ ಆಪಕೆ ಲಿಖಾವಟ್ ಕಾ ದಿವಾನಾ ಬನಾಯಾ
ಹಮಾರೆ ದಿಲ್ ಸೆ ಖುಚ್ ಕಹೆ ಐಸಾ ಖಯಾಲ್ ಆಯಾ
ಯುಂಹಿ ನಹಿ ಲಿಕ್ ಪಾತೆ ಹಮ್ ಐಸೆ ಶಾಯರಿಕೊ
ಅರೆ ಶಾಯರಿ ಲಿಕನೆಕಾ ಕುಚ್ ನಯಾ ಅಂದಾಜ್ ಆಯಾ

ನಿಮ್ಮ ಹಿಂದಿ ಭಾಷೆಯ ಹಿಡಿತ ಚೆನ್ನಾಗಿದೆ. ಅಂತೆಯೆ ನಿಮ್ಮ ಗಜಲ್
ಕೂಡ. ನಿಜ ಕೆಲವೊಮ್ಮೆ ಹಿಂದಿಯಲ್ಲಿ ಬರೆಯೋದು ಕಷ್ಟವಾಗುತ್ತೆ.
ಪರವಾಗಿಲ್ಲ .. ಕನ್ನಡದಲ್ಲಿ ಬರೆದರು ಅದರ ಅರ್ಥಕ್ಕೇನು ದಕ್ಕೆ ಇಲ್ಲ.
ಒಂದು ಒಳ್ಳೆಯ ಪ್ರಯತ್ನ ...

ತೇಜಸ್ವಿನಿ ಹೆಗಡೆ said...

"गज़ल" ಅನ್ನು ಗಜ಼ಲ್ ಎಂದು ಹಿಂದಿ ಕನ್ನಡ ಎರಡೂ ಭಾಷೆಯಲ್ಲೂ ಚುಕ್ಕಿಗಳನ್ನಿಟ್ಟು ಬರೆಯಬಹುದು. ಬರಹದಲ್ಲಿ ಹೆಲ್ಪ್ ಮೆನುಗೆ ಹೋದರೆ ಎಲ್ಲಾ ಉದಾಹರಣೆಗಳೂ ಸಿಗುತ್ತವೆ. ಗಜ಼ಲ್ ಬರೆಯಲು ನೀವು "gazal" ಈ ರೀತಿ ಟೈಪ್ ಮಾಡಬೇಕು.

ಇನ್ನು ಗಜ಼ಲ್ ಕುರಿತು - बहुत खूब... लाजवाब...क्या बात है!! :)

ಮನಸು said...

tumba chennagide ..........

sunaath said...

ಸಾಗರಿ,
ಹಮ್ ಆಶಿಕ ಬನ ಗಯೇ ಆಪಕೀ ಶಾಯರೀಕಾ!

V.R.BHAT said...

ಗಜಲ್ ಗಳು ತುಂಬಾ ಅರ್ಥಗರ್ಭಿತ! ಕನ್ನಡದ ಜಾನಪದ ಹಾಡುಗಳ ಸೊಗಡು ಈ ಗಜಲ್ ಗಳಲ್ಲಿ ಕಾಣಸಿಗುತ್ತದೆ, ಓದಿದಷ್ಟೂ ಖುಷಿಕೊಡುತ್ತದೆ ಮತ್ತು ಒಂದು ರಿಧಮ್ ನಲ್ಲಿ ಹಾಡಿಕೊಳ್ಳಲು ಬರುವುದರಿಂದ ಕೇಳಲೂ ಹಿತಕರ, ಚೆನ್ನಾಗಿವೆ ಈ ಗಜಲ್ ಗಳು, ಥ್ಯಾಂಕ್ಸ್

Subrahmanya said...

ತುಂಬ ಚೆನ್ನಾಗಿ ಬರೆದಿದ್ದೀರಿ ಸಾಗರಿಯವರೆ. ವಿನೂತನ ಪ್ರಯೋಗ ಬ್ಲಾಗಿನಲ್ಲಿ ನಡೆದಿದೆ. ಇದು ಮುಂದುವರಿಯಲೆಂದು ಆಶಿಸುತ್ತೇನೆ.

ಅನಿಲ್ ಬೇಡಗೆ said...

ದರ್ದ್-ಇ-ದಿಲ್ ಕಿ ತೊ ದವಾ ನಹಿ, ಹಂ ತೊ ಸಿರ್ಫ್ ದುವಾ ಕರ್ಸಕೆಂಗೆ.. ಬಹುತ್ ಖುಬ್..
ತುಂಬಾ ಸುಂದರವಾದ ಗಜಲ್ ..

ಬಿಡುವಿದ್ದಾಗ ಭೇಟಿಕೊಡಿ,
www.pennupaper.blogspot.com

ಮನಮುಕ್ತಾ said...

वाह...! वाह...!

ಸಾಗರದಾಚೆಯ ಇಂಚರ said...

Good One Sagari

ದಿನಕರ ಮೊಗೇರ said...

ಸಾಗರಿ ಮೇಡಂ,
ಸುಂದರ ಘಜಲ್.... ಬಹಳ ಚೆನ್ನಾಗಿದೆ.....

ಬಡತೀ ರಾತ್ ಮೆ ಖುಲೆ ಮೈಖಾನೆ ಕಹಾಂ ಡೂಂಢೆ
ದರ್ ದರ್ ಫಿರ್ ಕೆ ಆತೇ ಥೆ ಕದಮೋ ತಲೆ ತೇರೆ
ತೇರೀ ನಶೀಲಿ ಆಂಖೆ ಪಿಲಾತೀ ಥಿ ಇಸ್ ಕದರ್ ಜಾಮ್ ಹಮ್ ಕೊ
ಶರಾಬೀ ಬನಾಕೆ ಛೋಡಾ ಹೈ ತೂನೆ, ಐಸಾ ಹಮ್ ನೆ ಕ್ಯಾ ಕಿಯಾ

ಮೇಲಿನ ಸಾಲುಗಳಲ್ಲಿ, ''ಐಸಾ ಹಮ್ ನೆ ಕ್ಯಾ ಕಿಯಾ'' 'ಐಸಾ ಹಂ ನೆ ಕಿಯಾ ಕ್ಯಾ...' ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅಂತ ನನ್ನ ಅಭಿಪ್ರಾಯ....

Dileep Hegde said...

ಗಝಲ್ ತುಂಬಾ ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

ತುಂಬಾ ಸುಂದರವಾದ ಗಜಲ್!
ತಾವು ಕನ್ನಡದಲ್ಲೂ ಬರೆಯಬಹುದು. ನನ್ನ ಮಿತ್ರ ವಾಮನ ಕುಲಕರ್ಣಿ ಸುಂದರವಾಗಿ ಕನ್ನಡದಲ್ಲಿ ಗಜಲ್ಲನ್ನು ಪ್ರಯೋಗಿಸಿದ್ದಾರೆ. ಅದನ್ನು ನಾನು ಅವರ ಹೆಸರಿನ ಬ್ಲಾಗ್-ನಲ್ಲಿ ಹಾಕಿದ್ದೇನೆ. ತಾವು ಓದಿ ಅಭಿಪ್ರಾಯ ತಿಳಿಸಿ.
ಕೊಂಡಿ: http://vamkulkarni.blogspot.com/2010/04/blog-post_1967.html
(ಅವರ ಗಜಲ ಗಳು ಕೆನ್ನೆ ಮೇಲೆ ಒಣಗದ ಹನಿಗಳು ಎಂಬ ಲೇಬಲ್ ಅಡಿ ಹಾಕಲಾಗಿದೆ.-ಸುಮಾರು ೧೫ ಗಜಳಗಳಿವೆ)

ನಾಗರಾಜ್ .ಕೆ (NRK) said...

Kya baat hai,Kya baat hai.
bahoot khoob . . .

ಮನಸಿನಮನೆಯವನು said...

ಸಾಗರಿ.. ,

ಚೆನ್ನಾಗಿದೆ..

Shweta said...

ವಾಹ್.. ಕ್ಯಾ ಬಾತ್ ಹೈ..
but nange Hindi/urdu yaavdu arthaa agolla.Hindi li bahala hinde naanu.adike friend help togonde artha madikolloke:)

Kannada dalli Gajal prayatna maadbahudalla?
Mirja Gaaleebaranna nenesutta..

ಪ್ರವೀಣ್ ಭಟ್ said...

Gajal bagge tilisikottiddake Thanks..

kshamisi nange hindi sariyagi artha agade irodrinda kavanada bagge comment madokagalla..

ಜಲನಯನ said...

सागरि की इन शायरियॊं ने इशारा येह करदिया
नहीं कम हम भी किसी से साबित येह करदिय

ಮುಸ್ಕುರಾನೆ ಸೆ ಪೆಹಲೆ ಸೋಚ್ ಲಿಯಾ ಹೋತಾ
ದಿಲ್ ಜಲಾನೇ ಸೆ ಪೆಹಲೆ ಪೂಛ್ ಲಿಯಾ ಹೋತಾ
ಅಶ್ಕೋಂಕೆ ಆಗ್ ಜೋ ಸೀನೇ ಮೆ ಜಲ್ ರಹೀ ಹೈ
ಸುಲಝತೆ ಅರಮಾನೋ ಸೆ ಖಿಲವಾಡ್ ಆಖಿರ್ ಕ್ಯೋ ಕಿಯಾ
ಬಹಳ ಸುಂದರವಾಗಿವೆ ಸಾಲುಗಳು...ಸಾಗರಿ...ನಿಮ್ಮ ಈ ಕೃಷಿ ಮುಂದುವರೆಯಲಿ.

ಸಾಗರಿ.. said...

ವಿಜಯಶ್ರೀ ಅವರೆ,
ಕೃಷ್ಣಮೂರ್ತಿಯವರೆ,
ಪ್ರಕಾಶಣ್ಣ ಅವರೆ,
ಶ್ರೀಧರ್ ಅವರೆ,
ತೇಜಸ್ವಿನಿಯವರೆ,
ಮನಸ್ಸು ಅವರೇ,
ಕಾಕಾ,
ವಿ.ಅರ್.ಭಟ್ ಅವರೇ,
ಶಂಭುಲಿಂಗ ಅವರೇ,
A-Nil ಅವರೆ,
ಮನಮುಕ್ತಾ ಅವರೆ,
ಗುರು ಅವರೆ,
ದಿನಕರ್ ಅವರೆ,
ದಿಲೀಪ್ ಅವರೇ,
ಸೀತಾರಾಮ್ ಸರ್,
ನಾಗರಾಜ್ ಅವರೆ,
ಕತ್ತಲೆ ಮನೆ ಅವರೆ,
ಶ್ವೇತಾ ಅವರೇ,
ಪ್ರವೀಣ್ ಅವರೇ
ಹಾಗೂ
ಅಜಾದ್ ಸರ್,

ತಮ್ಮೆಲ್ಲರಿಗೂ ಗಜಲ್ ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನಾನು ಹಿಂದಿಯನ್ನು 5th,6th,7th ವರೆಗೆ ಮಾತ್ರ ಓದಿದ್ದು, ಹಿಂದಿ ಭಾಷೆ ಅಲ್ಪ ಸ್ವಲ್ಪ ತಿಳಿದಿದ್ದರೂ ಲಿಪಿ ದೇವನಾಗರಿಯೇ ಆದರೂ ಬದನ್ನು ಹಿಂದಿಯಲ್ಲಿ ಬಳಸಲು ಸ್ವಲ್ಪ ತೊಡಕಾಯ್ತು. ದಿನಕರ್ ಅವರೇ, ತಮ್ಮ ಸಲಹೆಗಳಿಗೆ ಧನ್ಯವಾದಗಳು. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿರುವೆ.. ಮತ್ತೆ

ತೆಜಸ್ವಿನಿಯವರಿಗೂ ಸಲಹೆಗಳಿಗೆ ಧನ್ಯವಾದಗಳು(ಗಜಲ್ ಎಂದು ಬರೆಯುವ ರೀತಿ ತಾವು ತಿಳಿಸಿದಂತೆ ಪ್ರಯತ್ನಿಸಿದೆ, help menu ದಲ್ಲಿ about baraha pad ಅನ್ನುclick ಮಾಡಿದ್ರೆ ಯಾಕೋ open ಆಜಿಲ್ಲೆ)

M.A ಓದುವಾಗ ಕೆಲವು ಮುಸ್ಲಿಂ ಸ್ನೇಹಿತೆಯರ ಸಹಾಯ ಪಡೆದು ಉರ್ದು ಕಲಿಯುವ ಪ್ರಯತ್ನವನ್ನೂ ಮಾಡಿದ್ದೆ, ಅ ಬೆ ಪೆ ತೆ ಟೆ ಸೆ ಗಿಂತ ಮುಂದೆ ಹೋಗಲೇ ಇಲ್ಲ ಗಾಡಿ(ಅವರಿಗೂ ಉರ್ದು ಓದಲು ಬರೊಲ್ಲವೆಂದು ಹೇಳ್ತಿದ್ರು). ಅಜಾದ್ ಅವರೇ ತಿಳಿಸಬೇಕು ಗಜಲ್ ನ ಗ್ರಾಮರ್ ಬಗ್ಗೆ :-)

ಕನ್ನಡದಲ್ಲಿಯೂ ಗಜಲ್ ಬರೆಯುತ್ತಾರಂತೆ, ನಾನಿನ್ನೂ ಓದಿಲ್ಲ. ನನಗೆ ಹಿಂದಿ ಮತ್ತು ಉರ್ದುವಿನ ಪದ ಲಾಲಿತ್ಯ, ವೈಖರಿ ಮತ್ತು ಕೋಮಲತೆ ಬಹಳ ಇಷ್ಟವಾಗಿದ್ದರಿಂದ ಹಿಂದಿಯಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ ಅಷ್ಟೆ. ಸೀತಾರಾಮ ಸರ್ ಅವರೆ, ವಾಮನ ಅವರ ಗಜಲ್ ಅನ್ನು ಆದಷ್ಟು ಬೇಗ ಓದುತ್ತೇನೆ.

ಅಹನ್ ಮಲಗಿದಾಗ ಅಡಿಗೆ ಕೆಲಸ,, ಅಹನ್ ಎಚ್ಚರವಿದ್ದಾಗ ಅವನೊಂದಿಗೆ ಆಟ.. ಆದ್ದರಿಂದ ಗಜಲ್ ಓದಿ ಅಭಿಪ್ರಾಯ ತಿಳಿಸಿದ ತಮ್ಮೆಲ್ಲರಿಗೂ ಒಂದೊಂದಾಗಿ ಧನ್ಯವಾದ ತಿಳಿಸಲಾಗುತ್ತಿಲ್ಲ.. ಮನ್ನಿಸುವಿರೆಂದು ತಿಳಿದಿದ್ದೇನೆ.

ಧನ್ಯವಾದಗಳು.

ಅನಂತ್ ರಾಜ್ said...

ಗಜಲ್ ಎ೦ದರೆ ಹಿ೦ದಿ ಸಿನೆಮಾದಲ್ಲಿ ನೋಡಿ ತಿಳಿದ ಅನುಭವ ಅಷ್ಟೆ. ನಿಮ್ಮಿ೦ದ ಒ೦ದಿಷ್ಟು ಮಾಹಿತಿ ಕೂಡ ಲಭ್ಯವಾಯಿತು.
ಶುಭಾಶಯಗಳು

ಅನ೦ತ್

Badarinath Palavalli said...

ಗಜಲ್ ಚನ್ನಾಗಿದೆ ಸಾಗರಿ ಅವರೇ,

ಇದನ್ನೇ ಯೋಗಾಯೋಗ ಅಂತಾರೇ,

ನಾನು ಸುಮಾರು ದಿನಗಳಿಂದ ನನಗೊಬ್ಬರು ಉರ್ದು / ಪರ್ಶಿಯನ್ ಗೊತ್ತಿರುವವರು ಹುಡುಕುತ್ತಿದ್ದೆ. ನಾನು ಸ್ವಲ್ಪ ಮಿರ್ಜಾ ಗಾಲೀಬ್ ಗಜಲ್ ಅನುವಾದಕ್ಕೆ ಪ್ರಯತ್ನ ಪಟ್ಟಿದ್ದೆ. ನೀವು ನನಗೆ ಸಹಾಯ ಮಾಡಬಲ್ಲಿರಾ?

ನನ್ನ ಗಜಲ್ ಒಮ್ಮೆ ಓದಿರಿ ಪ್ಲೀಸ್: (ಇವು ಬರೀ ಬಾವಾನುವಾದವಷ್ಟೇ)

http://badari-poems.blogspot.com/2010/01/blog-post_8625.html

http://badari-poems.blogspot.com/2009/12/blog-post_6611.html

my email: tentcinema@gmail.com

Anonymous said...

ಹೇಗಿದ್ದೀರಿ ಚಿನ್ಮಯಿ??

Ramesh said...

ಸಾಗರಿ - ಮೋದಲಿಗೆ ನಿಮ್ಮ ಬ್ಲೊಗ್ ಗೆ ಬಹಳ ತಡವಾಗಿ ಬಂದದ್ದಕ್ಕೆ ಕ್ಷಮೆ ಇರಲಿ.

ನಿಮ್ಮ ಈ ಪ್ರಯತ್ನ ಬಹಳ ಚೆನ್ನಾಗಿದೆ. ನನಗೆ ನಿಮ್ಮ ಶಾಯರಿಗಳ ಮಾಲೆ ಬಹಳ ಇಷ್ಟವಾಯ್ತು. ನಿಮ್ಮದೇ ಒಂದು ಸಾಲನ್ನಿಟ್ಟುಕೊಂಡು ಒಂದು ಸಣ್ಣ ಶಾಯರಿ ನಿಮಗೆ ಸಮರ್ಪಿಸುತ್ತಿದ್ದೇನೆ. ಹೀಗೆ ಬರಿತಾ ಇರಿ... ಜೈ ಹೋ !!

"ಅಶ್ಕೋಂಕೆ ಆಗ್ ಜೋ ಸೀನೇ ಮೆ ಜಲ್ ರಹೀ ಹೈ
ಜಲಾಕೆ ರಾಖ್ ಕರ್ದಿಯಾ ಹೈ ಉನ್ ಗೆಹ್ರೀ ಸಪ್ನೊಂಕೊ
ಸೊಛಾ ಥಾ ಜಲ್ ಕೆ ಬಿಖರ್ ಗಯೆ ಹೈ ಸಪ್ನೊಂಕೆ ಮಾಲ
ಪರ್ ಇಸ್ ಬೆದರ್ದೀ ನೆ ತೊ ಅಪ್ನಾ ದಿಲ್ ಭೀ ಥಾ ಜಲಾ ಡಾಲ"

ಸಮಯ ಸಿಕ್ಕಾಗ ನನ್ನ ಬ್ಲೊಗ್ ಕಡೆ ಬನ್ನಿ...

ಸಾಗರಿ.. said...

ಅನಂತ್ ರಾಜ್ ಅವರೇ,
ಬದ್ರಿನಾಥ್ ಅವರೆ,
ರಾಘವೇಂದ್ರ ಅವರೇ,
ರಮೇಶ್ ಅವರೆ,

ತಮ್ಮೆಲ್ಲರಿಗೂ ತಮ್ಮ ಪ್ರತಿಕ್ರೀಯೆಗಳಿಗೆ ಧನ್ಯವಾದಗಳು. ಬದ್ರಿನಾಥ್ ಅವರೇ, ನಾನೂ ಒಂದು ಲೆಕ್ಕದಲ್ಲಿ ಹಿಂದಿ ಹಾಗು ಉರ್ದುವಿನಲ್ಲಿ ಹೆಬ್ಬೆರಳು(ಬರೆಯಲು ಓದಲು ಬರಲ್ಲ, ಹಿಂದಿ ಬರತ್ತೆ ಉರ್ದು ಅಂತು ಬರೋದೇ ಇಲ್ಲ). ತಮ್ಮ ಭಾವಾನುವಾದಗಳನ್ನು ಓದಿದೆ, ಬಹಳ ಚೆನ್ನಾಗಿದೆ. ಹಾಗೆಯೇ ಬರೆಯುತ್ತಿರಿ. ರಮೇಶ್ ಅವರೆ ನನ್ನ ಗಜಲ್ ಗಿಂತ ತಮ್ಮ ಪ್ರತಿಕ್ರೀಯೆಯೇ ಚೆನ್ನಾಗಿದೆ. ಬಹಳ ಧನ್ಯವಾದಗಳು. ಬರುತ್ತಿರಿ.