Wednesday, June 23, 2010

ನೆರೆ-ಹೊರೆ(ಸ್ವಲ್ಪ ಜಾಸ್ತಿಯೇ ಹೊರೆ!!)

ನೆರಮನೆ


ನೆರಮನೆಯ
ಕಾಂಪೌಂಡು
ನಮ್ಮ ಮನೆಯ ಕಸದ ತೊಟ್ಟಿ,
ಯಾರೂ
ಕಣ್ಣಿಗೆ ಬೀಳದಿದ್ದಾಗ
ಉದುರಿದ ಒಣ ಎಲೆ, ಹಕ್ಕಿ ಪಿಷ್ಟಿ,
ಕಿಗ್ಗು ತೆಗೆದ ಹತ್ತಿ ಉಂಡೆ
ಚಾಕಲೇಟು ಸಿಪ್ಪೆ, ತರಕಾರಿ ಸೊಪ್ಪೆ
ಎಲ್ಲವನ್ನೂ
ಕಣ್ಣುಮುಚ್ಚಿ ಎಸೆಯಬಹುದಾದ
ಸುರಕ್ಷಿತ ಜಾಗ..

ನೆರಮನೆ,,
ನನ್ನವಳ ಕೋಪಗೃಹ
-ಅಡಿಗೆ ಮನೆಗೆ ಕಾಲಿಡದ ಹಠ ಹೂಡಿ
ಬಿಮ್ಮನೆ ಬಾಗಿಲೆರಸಿ
ಸುಲಭವಾಗಿ ನುಸುಳಿಕೊಳ್ಳಲು ಸಿಗುವ
ಅಡಗು ತಾಣ
ಒಂದೇ ಮಾತಲ್ಲಿಡುವುದಾದರೆ
ನೆರಮನೆಯಲ್ಲಿ ನನ್ನವಳ
ಉಪವಾಸ ಸತ್ಯಾಗ್ರಹ,,
ವ್ಯತ್ಯಾಸವಿಷ್ಟೇ
ಉಪವಾಸ ನನಗೆ
ಸತ್ಯಾಗ್ರಹಅವಳಿಗೆ.

ನೆರಮನೆ,,
ಹರಟೆ ಹೊಡೆಯಲು ಹವಣಿಸಿ
ಹಸಿದ
ಅತೃಪ್ತ ಆತ್ಮಗಳಿಗೆ
ದಿವ್ಯ ಸನ್ನಿಧಿ.
ತೂತಾಗದ ಕಿವಿ, ಒಡೆಯದ ಬಾಯಿ
ಹೊಂದಿರುವವರ
ಅತ್ಯದ್ಭುತ ಲೋಕ..

ಹ್ಹೆ,,ಹ್ಹೀ ನಮ್ಮದೂ ಅದೇ ಕುಟುಂಬ..
?
?
ನಮ್ಮನೆಯೂ ಇಲ್ಲೊಬ್ಬರ
ನೆರಮನೆಯೇ ಸರಿ..!

ವಿಗ್ರಹವಾಕ್ಯ ಬಿಡಿಸಿ ಸಮಾಸ ಹೆಸರಿಸಿದರೆ
ನೆರ(ರೆ)ಮನೆ= ಈಗಲೋ ಆಗಲೋ ಮುಳುಗಿಸುವ(ಮುಳುಗಿಸಲು ಹೊಂಚಿರುವ) ನೆರೆಯಲ್ಲಿರುವ ಮನೆ
ಷಷ್ಟಿ ತತ್ಪುರುಷ ಸಮಾಸ.

(ವ್ಯಾಕರಣಕಾರರ ಕ್ಷಮೆಕೋರಿ.)

19 comments:

Dr.D.T.Krishna Murthy. said...

ನೆರಮನೆ,ಎರವಾಗದೆ ,ನೆರವಾಗುವ ಮನೆಯಾಗಲಿ.ಕವನ ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

:D :D ನಿಜ... ಕಾಲನ ಕ್ಷಣ ಕ್ಷಣವಾಗಿ ಕೊಲ್ಲಲು ಉತ್ತಮ ಜಾಗ ಈ ನರೆ.... ಅಲ್ಲಲ್ಲಾ.. ನೆರೆಮನೆ :)

sunaath said...

ವಾಸ್ತವತೆಯೇ ಕವನರೂಪ ಪಡೆದಿದೆ.

ಸೀತಾರಾಮ. ಕೆ. / SITARAM.K said...

ವಾಸ್ತವತೆಯ ನವಿರು ಹಾಸ್ಯಲೇಪಿತ ಚೆ೦ದದ ಪದ್ಯ.

ಪ್ರವೀಣ್ ಭಟ್ said...

ha ha... nammadu neremaneye.. a neremanege :):) vastava baraha...

Chennagide

Pravi

© ಹರೀಶ್ said...

nammadu neramaneye-nimmadu neramaneye. adare paraspara neravagabeku ashte. nimma kavanada asya lepana channagide.

Honna Hani
http://honnahani.blogspot.com/

ನಾಗರಾಜ್ .ಕೆ (NRK) said...

just imagine, if our mouth made by Wood. then, might b Words would get real value. and very less temple,church and mosque. wow,a cool world. thank u nice one.

Subrahmanya said...

ಸ್ವಲ್ಪ ಜಾಸ್ತಿನೇ ಹೊರೆ ಅಂದ್ರಲ್ಲಾ..ಸತ್ಯ. ತುಂಬ ತಲೆ ಬಿಸಿ ಬಿಡಿ.

Dileep Hegde said...

ನಿಜ ನಿಜ.. ಕೆಲವೊಮ್ಮೆ ನೆರೆ ತುಂಬಾನೇ ಹೊರೆ..
ಕೆಲವೊಮ್ಮೆ ಟೈಮ್ ಪಾಸ್ ತಾಣ...
ಹಾಸ್ಯದ ಛಾಯೆಯಡಿ ವಾಸ್ತವ ಕವನ...
ಚೆನ್ನಾಗಿದೆ..

ಚುಕ್ಕಿಚಿತ್ತಾರ said...

:-)

ದಿನಕರ ಮೊಗೇರ said...

ನಿಜ, ಕೆಲವೊಮ್ಮೆ ಅದು, ಇಲ್ಲಿನ ವಿಷಯ ಎಲ್ಲರಿಗೂ ತಿಳಿಸುವ ಬಿ, ಬಿ, ಸಿ ಸಹ ಆಗುತ್ತಾರೆ..... ಒಳ್ಳೆಯ ಕವನ......

ಸಾಗರದಾಚೆಯ ಇಂಚರ said...

ನೆರೆಮನೆ, ನೆರೆ ತರದೇ ವರ ತರುವನ್ತಾಗಲಿ
ಸುಂದರ ಸಾಲುಗಳು ಮನಕ್ಕೆ ತತ್ತುವನ್ತಿವೆ

ದಿನಕರ ಮೊಗೇರ said...

nimma ooru yaavudu....... sitaaraam sir blog nallina comment nodi, ee prashne keluttiddene........

Raghu said...

ನೆರೆ-ಹೊರೆ(ಸ್ವಲ್ಪ ಜಾಸ್ತಿಯೇ ಹೊರೆ!!) ಇದೆ ತುಂಬಾ ಚೆನ್ನಾಗಿದೆ. ಹಾಗೆ ಕವನ ಕೂಡ.
ನಿಮ್ಮವ,
ರಾಘು.

ಮನಸಿನಮನೆಯವನು said...

ಸಾಗರಿ..,

ಸೊಗಸಾಗಿದೆ..
ಹೌದು ನಮ್ಮ ಮನೆಯೂ ಬೇರೆಯವರ ನೆರೆಮನೆಯೇ ಸರಿ..

Ranjita said...

ವಾಸ್ತವವನ್ನೇ ಹನಿಗಳ ಒಳಗೆ ಇಳಿಸಿದ್ದೀರಿ .. ತುಂಬಾ ಚೆನ್ನಾಗಿದೆ :)

ಸಾಗರಿ.. said...

ಕೃಷ್ಣಮೂರ್ತಿ ಅವರೇ,
ತೇಜಸ್ವಿನಿಯವರೇ,
ಕಾಕಾ,
ಸೀತಾರಾಮ್ ಅವರೆ,
ಪ್ರವೀಣ್ ಅವರೆ,
ಹರೀಶ್ ಅವರೇ
NRK ಅವರೆ
ಶಂಭುಲಿಂಗ ಅವರೆ,
ದಿಲೀಪ್ ಅವರೇ,
ವಿಜಯಶ್ರೀ ಅವರೆ,
ದಿನಕರ್ ಅವರೆ,
ಗುರು ಅವರೆ
ರಾಘು ಅವರೇ
ಮನಸಿನ ಮನೆಯವರೇ,
ರಂಜಿತಾ ಅವರೆ,

ಕವನವನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಸೀರಿಯಸ್ ಅಲ್ಲದ ಹಗುರವಾದ ಕವನವನ್ನು ಓದಿ ಅಭಿಪ್ರಾಯವನ್ನು ತಿಳಿಸಿದ್ದೀರಿ,,, ನಿಜ ಹೇಳಬೇಕೆಂದರೆ ತಮ್ಮೆಲ್ಲರಿಗೂ ಒಂದೊಂದಾಗಿ ಪ್ರತಿಕ್ರೀಯಿಸೋಣವೆಂದರೆ ಸಮಯಾಭಾವ ಆಗೋಯ್ತು.

ನಮ್ಮ ಮನೆಯ ಪಕ್ಕದ ಮನೆ ಒಬ್ಬ ಹೆಸರಾಂತ ಹಾಸ್ಯನಟನದ್ದು. ಅವರ ಹೆಂಡತಿ ಮಗಳು ಮಾತ್ರ,,, ಜಗಳವೇ ಮೈವೆತ್ತಿ ಬಂದಂತಿದ್ದಾರೆ(ಅವರ ಹೆಸರನ್ನು ಬಹಿರಂಗ ಪಡಿಸಲ್ಲ, ಕ್ಷಮಿಸಿ). ದಿನಕ್ಕೆ ೩-೪ ಜಗಳ ಅಕ್ಕಪಕ್ಕದವರೊಂದಿಗೆ, ದಾರಿಹೋಕರೊಂದಿಗೆ ಇದ್ದಿದ್ದೇ. thank god ನಮ್ಮದು 2nd floor. ಅವರೆ ನನಗೆ ಈ ಕವನ ಬರೆಯಲು ಸ್ಫೂರ್ತಿ..

ದಿನಕರ್ ಅವರೇ,
ನಮ್ಮೂರು ಕುಮಟೆ, ಮನೆತುಂಬಿಸಿಕೊಂಡವರು ಶಿರಸಿಯವರು. ಇರುವುದು ಬೆಂಗಳೂರಲ್ಲಿ.

ತಾವೆಲ್ಲರೂ ಹೀಗೆ ಬರುತ್ತಿರಿ. ಬಂದಿದ್ದು waste ಆಯಿತು ಎಂದು ನಿಮಗೆ ಅನ್ನಿಸದಂತೆ ಒಳ್ಳೆಯ ಬರಹವಿದ್ದರೆ post ಮಾಡುತ್ತಿರುತ್ತೇನೆ.

-ಸಾಗರಿ

Jyoti Hebbar said...

Superb kavana...tumba chennagide..

ಸಾಗರಿ.. said...

ಜ್ಯೋತಿಯವರೆ ಬಹಳ ತಡವಾಗಿ ಧನ್ಯಾವದಗಳನ್ನು ತಿಳಿಸುತ್ತಿದ್ದೇನೆ, ಕ್ಷಮಿಸಿ. ಹೀಗೆ ಬರುತ್ತಿರಿ