Wednesday, June 9, 2010

ನನ್ನ ಪುಂಗಿ

ಹೊ(ತೆ)ಗಳಿಕೊಳ್ಳುವವರೇ ನಿಮಗೊಂದು ಕಿವಿ ಮಾತು..



ಹಿಂದೊಂದು ಕಾಲದಲ್ಲಿ ಎಂದರೆ ತುಂಬಾ ಹಿಂದೆ ಹೋಗಬೇಕಿಲ್ಲ,,, ಈಗ್ಗೆ ಸುಮಾರು ೭-೮ (ಅಥವಾ ೪-೫)ವರ್ಷಗಳ ಹಿಂದೆ ಹೇಳಿಕೊಳ್ಳಲೂ ಮುಜುಗರಪಡುವ ಸಂಗತಿ ಈಗ ಹೆಮ್ಮೆಯ ವಿಷಯವಾಗಿದೆ ಎಂದರೆ ನಂಬ್ತೀರಾ???

ಕಾಲೇಜು ಹುಡುಗ/ಹುಡುಗಿಗೆ boy friend/girl friend ಇದ್ದಾನೆ/ಇದ್ದಾಳೆ ಅಂತಾದ್ರೆ ಆ ಕಾಲದಲ್ಲಿ ಹೆತ್ತವರು ತಲೆ ತಗ್ಗಿಸಿಯೆ ಓಡಾಡ್ತಿದ್ರು. ಈಗ ಅದು ಘನತೆಯ ವಿಷಯವಾಗಿದೆ. counts ಹೆಚ್ಚಿದಂತೆ ಘನತೆಯೂ ಹೆಚ್ಚು!! drinksನಂತಹ ಚಟಗಳ ವಿಷಯದಲ್ಲೂ ಹಾಗೆಯೇ.. ಪಾರ್ಟಿಯಲ್ಲಿ ಶರಾಬೀ ಝಲಕ್, ಹುಡುಗಿಯರ ಬಳುಕು ಇಲ್ಲದಿದ್ದರೆ ಅಂತಹ ಪಾರ್ಟಿಗಳಿಗೆ ಕಿಮ್ಮತ್ತೇ ಇಲ್ಲ. ಪಬ್ಬುಗಳಲ್ಲಿ, ಪಾರ್ಕುಗಳಲ್ಲಿ open romance ಗಳಿಗೂ ಈಗ ಭಾರೀ ಬೆಲೆ ಬಂದಿದೆ. ಇವೆಲ್ಲ ಇನ್ನು ಮುಂದೆ ಭಾರತೀಯ ಸಂಸ್ಕೃತಿಯಲ್ಲಾಗಬೇಕಾದ ಮಹತ್ತರ ammendment ಏನೋ!!!

ಹಮ್.. ನಾನೀಗ ಹೇಳಲು ಹೊರಟಿದ್ದು ಇದಲ್ಲ. ಮುಚ್ಚಿಟ್ಟುಕೊಳ್ಳಬೇಕಾದ ವಿಷಯವನ್ನು ಬಾಯ್ಬಿಟ್ಟು ಕೊಚ್ಚಿಕೊಳ್ಳುವ(infact ಕೊಚ್ಚಿಹೋಗುವ) ಮಂದಿಯದ್ದು. ಇದೊಂದು ಹೊಸಾ trend. ಮೇಲ್ವರ್ಗದವರಂತೂ ಬಿಡಿ,, ಮಧ್ಯಮ ಮತ್ತು ಕೆಳವರ್ಗದವರಲ್ಲೂ ಇದು ಈಗಿನ hottest and latest running trend.

ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿಯೂ ಇಲ್ಲ(ನನ್ನ ಮಗಳಿಗೆ/ತಂಗಿಗೆ/ಮೊಮ್ಮಗಳಿಗೆ ಅಡಿಗೆಯ ಗಂಧಗಾಳಿನೂ ಇಲ್ಲೆ)

ಮದುವೆ ವಯಸ್ಸಿಗೆ ಬಂದ್ರೂ ಹುಡುಗಿ ಇನ್ನೂ ಅಡಿಗೆ ಮನೆಗೆ ಕಾಲಿಟ್ಟಿಲ್ಲ ಕಣ್ರಿ(ಮದುವೆ ವಯಸ್ಸಿಗೆ ಬಂತಲೆ ಕೂಸು,, ಇನ್ನೂ ಅಡಿಗೆ ಮನೆಗೆ ಹೇಳಿ ಕಾಲಿಟ್ಟಿದ್ದಲ್ಲ ಮಾರಾಯ್ತಿ..)

ಇಷ್ಟು ವರ್ಷ education ಅಂತಾಯ್ತು, ಈವಾಗ jobಊ ಪಾಪ ಅಡಿಗೆ ಕಲಿಯೋಕೆ time ಎಲ್ಲಿದೆ.

ನಾನಿಲ್ಲ ಅಂದ್ರೆ ನನ್ ಮಗಳು ಹಸಿದುಕೊಂಡೆ ಇರ್ತಾಳೆ ಬಿಟ್ರೆ ಅವಳಿಗೆ ಅಡಿಗೆ ಎಲ್ಲಿ ಬರತ್ತೆ ಅಂತ ಮದುಮಗಳ ತಾಯಿ ಮಾತು..

ಇದ್ನೆಲ್ಲ ನೀವು ಅಲವತ್ತುಕೊಳ್ಳುವಿಕೆಯೋ ಅಥವಾ ದುಃಖದ ಮಾತೋ ಅಂತ ತಿಳಿದರೆ ತಪ್ಪಾದೀತು.. ಇವೆಲ್ಲಾ ಹೊಗಳಿಕೆಯ ಮಾತುಗಳು. ಬ್ಲಾಗಿನ ಲೋಕದಿಂದ ಮತ್ತು ಬೆಂಗಳೂರಿನಿಂದ ದೂರವಿದ್ದು ಒಂದು ತಿಂಗಳ ಮೇಲಾಯಿತಲ್ಲ,, ಮದುವೆ ಸೀಸನ್ನು ಮುಗಿಸಿ ಬರುವಾಗ ಮದುವೆಗೆ ಬಂದ ಮದುವೆ ವಯಸ್ಸಿನ ಹೆಣ್ಣು ಮಕ್ಕಳ ಅಮ್ಮಂದಿರ ಮಾತು ಕೇಳಿ ಎಂತಾ ಜಮಾನಾ ಬಂದಿದೆ ಅಂತ ಯೋಚಿಸುತ್ತ ಕುಳ್ಳುವಂತಾಯ್ತು ನನಗೆ. ಒಬ್ಬರಿಗಿಂತ ಒಬ್ಬರು ಜಂಬದಿಂದ ಅಡಿಗೆಯ ಅ ಆ ಇ ಈ ತಿಳಿಯದ ಮುದ್ದು ಹೆಣ್ಣು ಮಕ್ಕಳ ಬಗ್ಗೆ ಶೋಕಿಯಿಂದ ಜಂಬಕೊಚ್ಚಿಕೊಳ್ಳುತ್ತಿದ್ದರು. ಕೊಚ್ಚಿಕೊಳ್ಳುವ ಪರಿ ನೋಡಿಯೇ ಆನಂದಿಸಬೇಕು.

ತುಂಬಾ ಹಿಂದೆ ಹೋಗಿ ದಣಿಯಬೇಕೆಂದಿಲ್ಲ, ಬರೀ ೪-೫ ವರ್ಷಗಳ ಹಿಂದೆಅಡಿಗೆ ಬಾರದ ಹೆಣ್ಣು ಎಂದರೆ ಲೆಕ್ಕಕ್ಕೆ ಬೇಡಾ ಎನ್ನುವಂತಹ ಸ್ಥಿತಿ. ಹಾಡು-ಹೂ ಬತ್ತಿ, ರಂಗೋಲಿ ಯಾವುದೂ ಬೇಡಾ ಬಿಡಿ ಆದರೆ ಹೊಟ್ಟೆಗೆ ಹಿಟ್ಟನ್ನು ಬೇಯಿಸಲು ಬೇಕಾದ ಕನಿಷ್ಟ ತಿಳುವಳಿಕೆಯೂ ಇಲ್ಲದಂತೆ ಮಾಡಿದ್ದು ಯಾವುದಿರಬಹುದು?? ಹೆತ್ತವರ ಒಣಜಂಬ, ಪ್ರತೀಷ್ಠೆ, ಅತೀ ಪ್ರೀತಿ ಅಷ್ಟೆ. ಎಂತಹ ಪರಿಸ್ಥಿಯಲ್ಲೂ ಇದ್ದು ಜಯಿಸಿ ಬರಬೇಕಾದಂತೆ ಮಕ್ಕಳನ್ನು ಸಾಕಬೇಕಾದ ಪಾಲಕರೇ, ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹಸಿವೆಯಿಂದ ಹಾಗೆಯೇ ಮಲಗುವಷ್ಟು ಪರಾವಲಂಬಿಗಳನ್ನಾಗಿ ಮಾಡ್ತಿದ್ದಾರೆ!! ಈಗಿನ ಹುಡ್ಗೀರೂ ತಾವು ಅಡಿಗೆ-ಕೆಲಸ ಕಲಿತರೆ ಗಂಡಿಗಿಂತ ಕಡಿಮೆ ಎನ್ನುವ ಭಾವನೆ ಬೆಳೆಸಿಕೊಳ್ತಿದ್ದಾರೆ.

ದೊಡ್ಡ-ಸಣ್ಣ ಕೆಲಸಕ್ಕೆ ಹೋಗುವ ಹುಡ್ಗೀರಷ್ಟೇ ಅಲ್ಲ ಮನೆಗೆಲಸ-ಕೂಲಿಯನ್ನೇ ಆಧಾರವಾಗಿಟ್ಟುಕೊಂಡು ಬದುಕುವ ಮಂದಿಯದ್ದೂ ಇದೇ ಕತೆ. ಮೊನ್ನೆ ನಮ್ಮನೆ ಕೆಲಸದಾಕೆ ಹೇಳ್ತಾ ಇದ್ಲು-"ಮುಂದಿನ ತಿಂಗ್ಳು ನನ್ ಎರಡನೇ ಮಗ್ಳ ಮದುವೆ" ಅಂತ. ಅದಕ್ಕೆ ನಾ ಕೇಳಿದೆ-"ಓಹೊ, ಹಾಗದ್ರೆ ಅಡಿಗೆ ಮನೆ training ಜೋರು ಅನ್ನು. ಎಲ್ಲಾ ಕಲ್ತಿದ್ದಾಳಾ?" ಅವಳು "ಅಯ್ಯ್.. ಈಗ ಅದ್ನೆಲ್ಲಾ ಯಾರು ಕಲೀತಾರೆ, ಹಕ್ಕಿಗೆ ಹಾರೋದು ಹೇಳಿಕೊಡಬೇಕಾ,, ಮದ್ವೆ ಆದ್ಮೇಲೆ ತಾನಾಗಿಯೇ ಕಲಿತಾಳೆ. ನಿಮ್ಗೇನು ಮದ್ವೆಗಿಂತಾ ಮುಂಚೆ ಅಡಿಗೆ ಮಾಡ್ಲಿಕ್ಕೆ ಬರ್ತಿತ್ತಾ?" ಅಂತ ಸವಾಲೆಸೆದಳು. ನಾನು "ಶಿವಮ್ಮಾ,, ನಾನು ನನ್ ತಮ್ಮ ಪೇಟೆಯಲ್ಲಿ room ಮಾಡಿಕೊಂಡು ಕಾಲೇಜಿಗೆ ಹೋಗುವಾಗ ಅಡಿಗೆ ಮಾಡೋದು, ಪಾತ್ರೆ ಬಟ್ಟೆ ತೊಳೆಯೋದು, ಬಳಿಯೋದು ಎಲ್ಲಾ ನಾನೇ ಮಾಡ್ಕೊಂಡು ಓದ್ಕೋಬೇಕಿತ್ತು" ಅಂತ ಹೇಳಿ ಮಾತು ಮುಗಿಸಿದ್ದೆ. ನಾನು ಓದು ಮುಗಿಸಿ ೪ ವರ್ಷ ಕೂಡ ಸರಿ ಆಗಿಲ್ಲ ಜನರ ಯೋಚನೆ, ಅವರ style ಎಷ್ಟೊಂದು ಬದಲಾಗಿಬಿಟ್ಟಿದೆ.. ಮೈಮುರಿದು ದುಡಿಯುವವರೆ ಕೆಲಸ ಮಾಡುವುದು/ಕಲಿಯುವುದು ಅವಮಾನ ಅಂತ ತಿಳಿಯುತ್ತಿರಬೇಕಾದರೆ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರಲ್ಲಿ ಈ trend ಅದೆಷ್ಟು fast ಇರಬೇಡ.

ಯಾವುದಾದರು ತಾಯಿ "ನನ್ನ ಮಗ ಕೆಲಸಕ್ಕೇ ಹೋಗಲ್ಲ, ದುಡಿಯುವುದು ಅಂದ್ರೆ ಅವನಿಗೆ ಆಗೋದೇ ಇಲ್ಲ" ಅಂದ್ರೆ ಆ ಮಗನ ಬಗ್ಗೆ ಕೇಳಲೂ ನಮಗೆಷ್ಟು ಕಿರಿಕಿರಿ.. ಹಾಗೆಯೇ ಅಡಿಗೆಯೇ ಬರಲ್ಲ ಎಂದುಕೊಚ್ಚಿಕೊಳ್ಳುವ ತಾಯಂದಿರನ್ನು ಕಂಡಾಗಲೂ ಮೈ ಪರಚಿಕೊಳ್ಳುವಂತಾಗುತ್ತದೆ. ಮುಂದೊಂದು ದಿನ "ಮಗ ದುಡಿಯಲ್ಲ" ಅಂತ ಹೊ(ತೆ)ಗಳಿಕೊಳ್ಳುವುದೂ ಒಂದು trend ಆಗಬಹುದು.

ಇತ್ತೀಚೆಗೆ ನಮ್ಮ ಹುಡುಗರೇ ಭಾರೀ ರುಚಿ ಅಡಿಗೆ ಮಾಡೊದನ್ನ ಕಲ್ತಿದ್ದಾರ್ರಿ.. ಹೊರಗಡೆ ಕೆಲಸಕ್ಕೆ ಹೋಗಿಬಂದೂ ಮನೆಯಲ್ಲಿ ಕೂಳುಬೇಯಿಸಿಕೊಂಡು ತಿಂತಿದ್ದಾರೆ. ಆದರೆ ಯಕೋ ಹೆಣ್ಣುಮಕ್ಕಳು ಮಾತ್ರ ಎಲ್ಲದರಲ್ಲೂ ಮುಂದಿರಬೇಕೆಂದು ಬಯಸುವವರು ಅಡಿಗೆ ಕಲಿಯಲು ಸಂಕೋಚಪಡುತ್ತಿದ್ದಾರೋ??

ಪ್ರಸಂಗ ಬಂದಾಗ ತಾನಾಗಿಯೇ ಅಡಿಗೆ ಕಲೀತಾರೆ/ಮದುವೆಯಾದ್ಮೇಲೆ ಒಂದೊಂದೇ ಕಲೀತಾರೆ ಅನ್ನುವ ಮಾತೂ ಇದೆ. ಎಲ್ಲಾ ಸರಿ ಆದ್ರೆ ಮದ್ವೆಗಿಂತ ಮುಂಚೆ ಅಡಿಗೆ ಕಲಿತರೆ ತೊಂದರೆ ಎಂಥಾದ್ದು? ಗಂಡಂದಿರಿಗೆ ಏನೂ ಬರಲ್ಲ ಎಂಬ ಡೌಲಿನ ಹೆಂಡತಿಗಿಂತ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಹೆಂಡತಿಯೇ ಇಷ್ಟವಾಗ್ತಾಳೆ.ಮುಂದೊಂದು ದಿನ "ನಿಮ್ಮಮ್ಮ ಇದನ್ನೂ ಹೇಳಿಕೊಡ್ಲಿಲ್ವಾ" ಎಂಬ ಮಾತು ಬಂದು ಲಡಾಯಿ ಆಗಬಾರದಲ್ಲ ಅಂತ ಹೇಳಿದೆ ಅಷ್ಟೆ. ಹೊರ ಕೆಲಸಕ್ಕೆ ಹೋಗುವ ಮಹಿಳೆಯರೂ ಅಡಿಗೆ ಕಲಿತಿದ್ದರೆ ಆದಷ್ಟು ಬೇಗ ಅಡಿಗೆ ಮುಗಿಸುವ ಮತ್ತು ಗಂಡನಿಂದ ಸರಿಯಾಗಿ help ಪಡೆಯುವ ಕಲೆ ಕರಗತ ಮಾಡ್ಕೋಬಹುದು..

ಕೂಸು ಬರ್ಜರಿ ಓದ್ತು/ನೌಕರಿಯಲ್ಲಿದ್ದು ಅದಕ್ಕೆ ಅಡಿಗೆ ಮನೆಗೆ ಕಾಲಿಡಲೂ ಪುರುಸೊತ್ತಿಲ್ಲ ಎಂದು ಹೇಳಿಸಿಕೊಳ್ಳುವುದಕ್ಕಿಂತಲೂ ಎಷ್ಟೆಲ್ಲಾ ಓದಿಕೊಂಡು/ನೌಕರಿಗೆ ಹೋಗಿಬಂದು ಅಡಿಗೇನೂ ಚೆನ್ನಾಗಿ ಮಾಡ್ತು ಎನ್ನಿಸಿಕೊಳ್ಳಿವುದೇ ಒಂದು ತೂಕ ಜಾಸ್ತಿ ಅಲ್ಲವೇ?? ಈ ಮಾತು ಮನಸ್ಸಿಗೆ ಬಂದಿಲ್ಲವೆಂದರೆ atleast ಎಲ್ಲರೆದುರು ಕೆಲಸಬರದ ಕೂಸನ್ನು ಹೊ(ತೆ)ಗಳುವುದನ್ನಾದರೂ ಬಿಡಿ,, ನಿಮ್ಮ ಹಿಂದೆ ಆಡಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದೀತು!!

35 comments:

PaLa said...

ಹೆಣ್ಮಕ್ಳು ಅಡ್ಗೆ ಬರೋಲ್ಲ ಅಂತ ಹೆತ್ತವರು ಕೊಚ್ಕೊಳ್ಳೋದು ಯಾಕೋ.. ಇರಬಹುದು ಅವರಿಗೂ ಓದೋದು, ಕೆಲ್ಸ ..ಮಾಡೋದು ಇರುತ್ತೆ..

ಲೇಟೆಸ್ಟ್ ಕಥೆಯೊಂದು.. ಹುಡ್ಗ ಹುಡ್ಗಿ ಇಬ್ರು ಕೆಲ್ಸಕ್ಕೆ ಹೋಗೋರು.. ಹುಡ್ಗಂಗೆ ಮನೆ ಊಟ ಇಷ್ಟ, ಹುಡ್ಗೀಗೆ ಅಡ್ಗೆ ಬರೋದಿಲ್ಲ.. ಸರಿ ಅಂತ ಹುಡ್ಗನೇ ಅಡ್ಗೆ ಮಾಡ್ತಾ ಇದ್ದ. ಸ್ವಲ್ಪ ದಿನ ಆದಮೇಲೆ ಹುಡ್ಗಿ ತಕರಾರು.. ನಂಗೆ ಮನೆ ಊಟ ಹಿಡ್ಸೋಲ್ಲ.. ಹೋಟ್ಲಿದ್ದೇ ಬೇಕು ಅಂತ.. ಹುಡ್ಗ ಮನೆಗೆ ಬಂದು ಅಡ್ಗೆ ಮಾಡಿ, ಊಟ ಮಾಡಿ.. ಹೆಂಡತೀನ ಹೊರಗೆ ಊಟಕ್ಕೆ ಕರ್ಕೊಂಡ್ ಹೋಗಿ ಮಾಡ್ತಾ ಇದ್ದ.. ಇಷ್ಟೆಲ್ಲಾ ಮಾಡಿದಮೇಲೂ ಮದ್ವೆ ಆಗಿ ೧ ವರ್ಷದೊಳಗೆ ಹುಡ್ಗಿ ಡೈವರ್ಸ್ ಕೊಟ್ಲು.. ನಿಜವಾದ್ ಕಥೆ ರೀ :)

Dr.D.T.Krishna Murthy. said...

ಹುಡುಗರೇ ಆಗಲಿ,ಹುಡುಗಿಯರೇ ಆಗಲೀ ಎಲ್ಲರಿಗೂ ಅಡಿಗೆ ಮಾಡುವುದು ಬರಬೇಕು ಎಂಬುದೇ ನನ್ನ ಅಭಿಪ್ರಾಯ.
ಉಪ್ಪಿಟ್ಟು,ಅವಲಕ್ಕಿ,ಚಪಾತಿ,ಸುಲಭದಲ್ಲಿ ಮಾಡಬಹುದಾದ ಪಲ್ಯಗಳು,ಅನ್ನ,ಸಾರು,ಸಂಬಾರು -ಇವಿಷ್ಟನ್ನು ಯಾರು ಬೇಕಾದರೂ ಸುಲಭದಲ್ಲಿ ಕಲಿತುಮಾಡಬಹುದು.ಈಗ ಅಮೆರಿಕಾದಲ್ಲಿM.S.ಮಾಡುತ್ತಿರುವ ಹುಡುಗರೂ ತಾವೇ ಅಡಿಗೆ
ಮಾಡಿಕೊಳ್ಳುತ್ತಿದ್ದಾರೆ.ಹೋಟೆಲಿನಲ್ಲಿ ಬಹಳ ದಿನ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.

ಸಾಗರಿ.. said...

ಪಾಲಚಂದ್ರ ಅವರೇ,
ತಮ್ಮ ಕಾಮೆಂಟಿಗೆ ಧನ್ಯವಾದಗಳು. ಕಲಿಯುವುದು ಜೀವನದಿದ್ದಕ್ಕೂ ಇದ್ದೇ ಇರುತ್ತದೆ, ಅವಶ್ಯಕವಾದುದ್ದನ್ನು ಕಲಿಯಲು ಹಿಂದೇಟು ಹಾಕುವುದು ಸಮಂಜಸ ಕೂಡ ಎನ್ನಿಸುವುದಿಲ್ಲ. ನೋಡಿ ನೀವೇ ಹೇಳಿದಂತೆ ಎಂತೆಂತಹ ಸಂಸಾರಗಳಿರುತ್ತವೆ. ಕೆಲವೊಮ್ಮೆ ಸಂಸಾರ ಹಾಳಾಗಲು ಹೆತ್ತವರ ಕುರುಡು ಪ್ರೀತಿಯೂ ಕಾರಣವೇ ಆಗಿರುತ್ತದೆ ಎನ್ನಿಸುತ್ತದಲ್ಲವೇ

ಸಾಗರಿ.. said...

ಕೃಷ್ಣಮೂರ್ತಿ ಸರ್,
ನೀವು ಹೇಳಿದ್ದು ತುಂಬಾ ನಿಜ. ರಕ್ಷಣೆಗೆ ಹೇಗೆ ಹೆಣ್ಣು ಮಕ್ಕಳು ಕರಾಟೆಯಂತಹ ಕಲೆಗಳನ್ನು ಕಲಿಯುತ್ತಾರೋ ಭಕ್ಷಣೆಗೂ ಹುಡುಗ ಹುಡುಗಿಯರಿಬ್ಬರೂ ಅಡಿಗೆ ಕಲಿತಿದ್ದರೆ ಸಂಸಾರ ತೂಗಿಸಿಕೊಂಡು ಹೋಗಲು ಸುಲಭವೇ. ತಮ್ಮ ಪ್ರೀತಿಯ ಪ್ರತಿಕ್ರೀಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

nimma vichaara ishtavaaytu....saagaree..

nanagondu samaadhaana andre nanna magalu entane class nalli oduttiddaale; avalige aduge kaliyuvudu andre tumbaa ishta.hosa ruchi maaduvudaralli aasakti jaasthi.haagaagi kochchikolluva avakaasha tappihoytu.....!!!!!

baraha direct problem ninda inglish aksharagalalle barediddene...

sunaath said...

ನಮ್ಮ ಮಕ್ಕಳು ಅಡಿಗೆ ಮಾಡುವದನ್ನು, ಮನೆಗೆಲಸವನ್ನು ಕಲಿತಿಲ್ಲ ಎಂದು ಹೇಳುವದು ಬೇಜವಾಬುದಾರಿಯ ಮಾತೇ ಸೈ. ಇನ್ನೇನು, ಹುಡುಗರಿರಲಿ, ಹುಡುಗಿಯರಿರಲಿ ಎಲ್ಲರಿಗೂ ಪಾಕವಿದ್ಯೆ ಬರುವದು ಉಪಯುಕ್ತವಾಗಿದೆ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸಾಗರಿಯವರೆ,ನಿಮ್ಮ ಅಭಿಪ್ರಾಯ ಸರಿ. ನಾನೂ ಕೂಡಾ ಕೆಲಸಕ್ಕೆ ಹೋಗುವ ಹುಡುಗಿಗೆ ಅವರಮ್ಮ ಕಷ್ಟವಾದರೂ,ತಿ೦ಡಿ ಮಾಡಿ ಕೈತುತ್ತು ಕೋಡುವುದನ್ನು ನೋಡಿ ಬೆಚ್ಚಿಬಿದ್ದಿದ್ದೇನೆ.ಇದನ್ನು ಪ್ರೀತಿ ಎನ್ನಲೇ?ಮೌಡ್ಯ ಎನ್ನಲ್ಲೇ? ಇತ್ತೀಚೆಗೆ ಹುಡುಗಿಯರು pizza hut, pub,cofeeday ಗಳಲ್ಲಿ ಕೊಚ್ಚಿಹೋಗುವ/ಕಳೆದುಹೋಗುವ ಪರಿ ನನ್ನನ್ನು ಯೋಚಿಸುವ೦ತೆ ಮಾಡಿದೆ.(ಆದುನಿಕತೆಯೆ೦ಬ ಭ್ರಮೆ ಸೂಕ್ಷ್ಮ ಮಾನವೀಯ,ಸ೦ಬ೦ದಗಳನ್ನು/ಕನಿಷ್ಟ ಸೌಜನ್ಯಗಳನ್ನು ನಿದಾನವಾಗಿ ನು೦ಗಿ ಹಾಕುತ್ತಿದೆ.)ಹಿ೦ದಿರುಗಲಾರದಷ್ಟು ಮು೦ದೆ ಹೋದೆವೋ..ಎ೦ದು ಅನಿಸುತ್ತಿದೆ.

Subrahmanya said...

ಇತೀಚೆಗೆ ಎರಡು ವರ್ಷಗಳಿಂದ ಇಂತಹ "ಟ್ರೆಂಡ್" ಜಾಸ್ತಿಯಾಗಿದೆ. ನನ್ನದು ಸಾರ್ವಜನಿಕ ಕ್ಷೇತ್ರದ ಕೆಲಸವಾದುದರಿಂದ ಟ್ರೆಂಡ್ ಬದಲಾವಣೆಯನ್ನು ಬೇಗ ಗಮನಿಸಿರುತ್ತೇನೆ. ನಿಮ್ಮ ಚಿಂತನೆ ಸರಿಯಾಗಿದೆ. ಮಕ್ಕಳು ಹಾಳಾದ ನಂತರ ಪರಿತಾಪ ಪಡುವ ಬದಲು ಬಾಲ್ಯದಿಂದಲೆ ಉತ್ತಮ ಸಂಸ್ಕಾರ ಕೊಡುವುದು ಒಳ್ಳೆಯದು. Main reason ಅಂದ್ರೆ ಇತ್ತೀಚೆಗೆ ಎಲ್ಲರ ಕೈಯಲ್ಲೂ "ದುಡ್ಡು" ಹೆಚ್ಚಾಗಿ ಓಡಾಡ್ತಿರೋದು (ಸಾಲವಾದ್ರೂ ಸೈ) ಮತ್ತು ಹೈ-ಫ಼ೈ ಆಧುನಿಕತೆ ಗ್ರಾಮಗಳಿಗೂ ಕಾಲಿಟ್ಟಿರುವುದು. ಸತ್ಯ ಹೇಳ್ತಿನಿ, ಮದುವೆ ಆಗೋವರೆಗೂ ನನಗೂ ಅಡುಗೆ ಬರ್ತಿರಲಿಲ್ಲಾ..( ನನ್ನಾಕೆ ಪಾಕ ಪ್ರವೀಣೆ, ಬಿಡಿ), ಇತ್ತೀಚೆಗೆ ತಕ್ಕಮಟ್ಟಿಗೆ ಕಲಿತುಕೊಂಡೆ. ಅಡುಗೆ ಬರೋಲ್ಲ ಅನ್ನೋದನ್ನೇ ದೊಡ್ಡಸ್ತಿಕೆ ಎಂಬಂತೆ ಕೊಚ್ಚೋದು ಮೂರ್ಖತನ.

ಸಾಗರಿ.. said...

ಚುಕ್ಕಿ ಚಿತ್ತಾರ ಅವರೇ,
ಧನ್ಯವ್ವದಗಳು. ನಾನೂ ಎಲ್ಲಿಯೋ ಓದಿದ್ದೇನೆ ಮಕ್ಕಳನ್ನು ಗಂಡಿರಲಿ ಹೆಣ್ಣಿರಲಿ ಪಾಲಕರು ತಮ್ಮ ಕೆಲಸದಲ್ಲಿ ಆಗಾಗ ಅವರನ್ನೂ ಜೊತೆಗೆ ಸೇರಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಶಿಸ್ತು, ಮಾನವೀಯತೆ, ತಾಳ್ಮೆ , ಜೀವನ ಪ್ರೀತಿ ಬೆಳೆಯುತ್ತಂತೆ. ತಮಗಂತೂ ಹೊಗಳಿಸಿಕೊಳ್ಳುವ chance ತಪ್ಪಿ ಹೋಯ್ತು. ಒಳ್ಳೆಯದೇ ಆಯ್ತು :-)

ಸಾಗರಿ.. said...

ಕಾಕಾ,
ಇತ್ತೀಚೆಗೆ ಹೆತ್ತವರು tution, summer camp, cricket ಅದೂ ಇದೂ ಅಂತ ಸಾವಿರ ಕಲಿಸ್ತಾರೆ ಆದ್ರೆ ಜೀವನಕ್ಕೆ ಅತೀ ಅವಶ್ಯವೆನಿಸಿದ್ದನ್ನೇ ಬಿಡುತ್ತಾರೆ. ತಾವು ಮಕ್ಕಳನ್ನು ತುಂಬಾ ಕೋಮಲವಾಗಿ ಬೆಳೆಸುತ್ತಿದ್ದೇವೆ ಎನ್ನುವ ನಂಬಿಕೆ ಅವರಲ್ಲಿ ಗಟ್ಟಿಯಾಗಿದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರಿ.. said...

ಕುಸು ಮುಲಿಯಾಲ್ ಅವರೇ,
ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.ಒಂದು ದಿನ ನಮ್ಮನೆಗೆ engineering ಓದುತ್ತಿರುವ ನಮ್ಮದೇ ತೀರಾ ಹತ್ತಿರದ ಸಂಬಂಧಿ ಹುಡುಗಿಯೊಬ್ಬಳು ಬರುವವಳಿದ್ದಳು. ನನಗೋ ಜೋರು ಜ್ವರ. ಅಡಿಗೆಯನ್ನೆಲ್ಲ ಮಾಡಿ ಮುಗಿಸಿದ್ದೆ(ನನ್ನ ಸ್ಥಿತಿ ನೋಡಿ ನಮ್ಮ ಯಜಮಾನರೂ ನನ್ನ ಸಹಾಯಕ್ಕೆ ನಿಂತಿದ್ದರು). ಆಕೆ ಬಂದಾಗ ರೊಟ್ಟಿ ಮಾಡುವ ಕೆಲಸ ಮಾತ್ರ ಬಾಕಿ ಇತ್ತು. ಯಜಮಾನರು ರೊಟ್ಟಿ ಕೆಲಸವನ್ನು ನಮ್ಮ ಕೈಗೆ ಒಪ್ಪಿಸಿ ಕೆಲಸದ ನಿಮಿತ್ತ ಹೊರಗೆ ಹೋದರು. ಬರುವ ವರ್ಷ ಇಂಜಿನೀಯರಿಂಗ್ ಮುಗಿಸುವ ಹುಡುಗಿ ನನಗೆ ರೊಟ್ಟಿ ಲಟ್ಟಿಸಲೂ ಬರುವುದಿಲ್ಲ ಸುಡಲೂ ಬರುವುದಿಲ್ಲ ಅಂತ t.v ನೋಡಲು ಕುಳಿತುಬಿಟ್ಟಳು. ಸ್ವಲ್ಪವೂ ಮಾನವೀಯತೆಯೇ ಇಲ್ವಲ್ಲ ಅನ್ನಿಸಿತು. ಇಂತವರೂ ಇರ್ತಾರೆ.

ಸಾಗರಿ.. said...

ಶಂಭು ಲಿಂಗ ಅವರೆ,
ನನಗೂ ನನ್ನ ಆಯಿ ಒಂದು ಮಾತು ಯಾವಗಲೂ ಹೇಳುತ್ತಿದ್ದುದು ನೆನಪಿದೆ, ಕೆಲಸ ಮಾಡಿ ಕೆಟ್ಟವರಿಲ್ಲ ಅಂತ. ಕೈಗೊಂದು ಕಾಲಿಗೊಂದು ಆಳು, ಆಳು ಬರದಿದ್ದರೆ ಅವರ ಅಳಲು ಕೇಳಲಾಗದು. ಆಳುಗಳನ್ನು ಇಟ್ಟುಕೋಬಾರದು ಅಂತಲ್ಲ ಆದರೆ ಅವರಿಲ್ಲದಿದ್ದರೆ ಜೀವನ ಸಾಗದು ಎಂಬಷ್ಟು ಅವಲಂಬಿಗಳಾಗಬಾರದು ಅನ್ನುವುದೂ ನನ್ನ ಅಭಿಪ್ರಾಯ. ಅಡುಗೆ ಮಾಡುವುದು ಅವಮಾನದ ವಿಷಯ ಎನ್ನುವ ನಿಲುವು ಮೂಡಿಸುತ್ತಿರುವುದು ಸರಿಯಲ್ಲ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸಾಗರಿ ನಿಜ
ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ಅರಿವು ನಮಗಿರಬೇಕು
ಪಾಶ್ಯಾತ್ಯರ ಅನುಕರಣೆ ಒಳ್ಳೆಯದರಲ್ಲಿ ಬೇಕು
ಇಂಥಹ ವಿಷಯಗಳಲ್ಲಿ ಅಲ್ಲ

© ಹರೀಶ್ said...

ಸಾಗರಿಯವರೆ ನೀವು ಹೇಳಲೊರಟಿರುವುದು ಅರ್ಥ ಚನ್ನಾಗಿದೆ. ಗಂಡಾಗಲಿ ಹೆಣ್ಣಾಗಲಿ ಕೆಲಸ ಕಾರ್ಯದ ಜೊತೆಗೆ ಅಡುಗೆ ಮಾಡುವುದನ್ನ ಕಲಿತರೆ ನಮ್ಮ ಆರೋಗ್ಯದ ಜೊತೆಗೆ ನಾವುಗಳು ಹೆಚ್ಚು ವರ್ಷ ಬದುಕಬಹುದು

Vinay Hegde said...

lekhana tumba chanaagiddu... eegina present trndee hange bandoydu...idanella nodidre... namge idella bekitta anustu... hindina kaaladalli astu dudime ilde iddidru... enoo nemmadi ittu.. but eega ella iddu still yantu ille...ee vishayad mele estondu charche manastaapagalu aagtu... at last peace of mind will be lost..!!!... Nice article... keep writing..!!!

ಮನದಾಳದಿಂದ............ said...

ಅಡುಗೆ ಮಾಡಲು ಬರದ ಹುಡುಗಿಯ ಬಗ್ಗೆ ಕೊಚ್ಚಿಕೊಳ್ಳುವ ಜನ ಅದ್ಯಾವ ಸೀಮೆ ಜನಾರಿ? ಹಳ್ಳಿಗಳಲ್ಲಿ ಇಂತ ಸಂಪ್ರದಾಯ ಇನ್ನೂ ಕಾಲಿಟ್ಟಿಲ ಅಂತ ನನ್ನ ಅಭಿಪ್ರಾಯ!
ಆದರೂ ಭಾರೀ ಕಷ್ಟಾನೆ!


visit my blog at
http://pravi-manadaaladinda.blogspot.com

ಸಾಗರಿ.. said...

ಗುರು ಅವರೆ,
ಅಭಿಪ್ರಾಯಕ್ಕೆ ಧನ್ಯವಾದಗಳು. ಒಂದಿಷ್ಟು ದಿವಸ ನಾನು ಹುಟ್ಟೂರಿಗೆ ತೆರಳಿದ್ದರಿಂದ ತಮಗೆ ಸ್ವದೇಶ ಪ್ರಯಾಣಕ್ಕೆ ಶುಭಾಷಯಗಳನ್ನೂ ತಿಳಿಸಲಾಗಲಿಲ್ಲ. ಪ್ರಯಾಣ ಹಾಗೂ ಇಲ್ಲಿನ ದಿನಗಳು ಸುಖವಾಗಿತ್ತೆಂದು ತಿಳಿಯುವೆ.

ಸಾಗರಿ.. said...

ಹರೀಶ್ ಅವರೇ,
ತಮಗೆ ನನ್ನ ಬ್ಲಾಗಿಗೆ ಸ್ವಾಗತ. ಮನೆ ಊಟ ಎಂದಿಗೂ ಆರೋಗ್ಯಕರವೇ. ಮನೆಯಲ್ಲಿ ಆರೋಗ್ಯ ಸಂತಸ ಕೊಡುವ ಅಡುಗೆಯನ್ನು ಕಲಿಯಲು ಹಿಂಡೇಟು ಹಾಕುವುದು ಅರ್ಥಹೀನ. ಧನ್ಯವಾದಗಳು.

ಸಾಗರಿ.. said...

ವಿನಯ್ ಅವರೇ,
ನೀವು ಹೇಳಿದ್ದು ಭಾರೀ ನಿಜ. ನಂಗ ನಂಗಳ ಖುಷಿಯನ್ನು ಕೊಟ್ಟು ಈಗಿನ ಆಧುನಿಕ ಬದುಕನ್ನು ಕೊಂಡುಕೊಂಡ ಹಾಗೆ ಅನಿಸ್ತು ಅಲ್ದ. ಹವ್ಯಕರಲ್ಲಂತೂ ಅಡುಗೆ ಮಾಡದ style ಸಿಕ್ಕಾಪಟ್ಟೆ ಹೆಚ್ಚಗ್ತಿದ್ದು, ಎಂತಕ್ಕೆ ಅಂದ್ರೆ ಎಲ್ಲರೂ enginner doctor ಆಗ್ತಿದ್ದ, at the same time ಅಷ್ಟು ದೊಡ್ಡ ನೌಕರಿ ಜನಕ್ಕೆ ಪ್ರೀತಿಯ ಹೆಂಡತಿಯಾಗಲು time ಇಲ್ಲೆ ಅಥವಾ ಅದು ಅವರ level ಅಲ್ಲ ಅಂತ ತಿಳ್ಕಂಜ. ಧನ್ಯವಾದಗಳು

ಸಾಗರಿ.. said...

ಪ್ರವೀಣ್ ಅವರೇ,
ಪೇಟೆಯವರಲ್ಲಿ ಈ ಭಾವನೆ ಬಂದು ಹಲವು ವರ್ಷಗಳೇ ಆಗಿರಬಹುದು, ಹಳ್ಳಿಯಲ್ಲೂ ಈ trend ಬಂದಿದೆ ಎನ್ನುವುದೇ ಆತಂಕದ ವಿಷಯವಾಗಿದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

Ramesh said...

ಸಾಗರಿಯವರೆ - ನಿಮ್ಮ ಮಾತು ನಿಜ.. ಇದೇ ಹೆಣ್ಣು ಮಕ್ಕಳು ಅಥವ ಗಂಡು ಮಕ್ಕಳು ಹೊರದೇಶಗಳಿಗೆ ಹೊದಾಗ ಅವರೆ ಬಂದ ಹಾಗೆ ಅಡುಗೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಅಲ್ಲಿ ಹಣ ಉಳಿಸುವ ಯೋಚನೆ ಇರುತ್ತದೆ. ಆದರೆ ಅವರಿಗೆ ನಮ್ಮ ದೇಶದಲ್ಲಿ ಮದುವೆಯಾದಾಗ ಅಡುಗೆ ಬರೊದಿಲ್ಲ ಅಂತ ಹೇಳುತ್ತಾರೆ. ಇದು ಒಂದು ರೀತಿಯ ವಿಪರ್ಯಾಸವೇ ಸರಿ. ಒಂದು ಹೆಣ್ಣನ್ನು ಯಾರ ಮನೆಯಲ್ಲೂ ಕೆಲಸಕ್ಕೊಸ್ಕರ ಮದುವೆಯಗೊಲ್ಲ. ಆದರೆ ಹೊರಗಿನ ಕೆಲಸವನ್ನು ಯಾರು ಬೆಕಾದರೂ ಮಾಡಬಹುದು ಆದರೆ ಒಂದು ಸಂಸಾರವನ್ನು ಉಳಿಸಿ ಬೆಳಸುವ ಜವಾಬ್ದಾರಿಯು ಹಿಂದಿನಿಂದ ಒಂದು ಹೆಣ್ಣಿಗೆ ಸಿಕ್ಕಿದೆ. ಇದೂ ಕೂಡ ಒಂದು ಹೆಮ್ಮೆಯ ಮಾತೆ ಅಲ್ಲವೇ? ಒಂದು ಹೆಣ್ಣಿಗೆ ನಮ್ಮ ಸಮಾಜದಲ್ಲಿ ಇರುವ ಮರ್ಯಾದೆ ಹಾಗು ಸ್ಥಾನ-ಮಾನಗಳು ಕಡಿಮೆಯಾಗುತ್ತಿರುವುದು ಬೇಸರದ ವಿಶಯವೆ ಸರಿ. ಆದರೆ ಇದಕ್ಕೆ ಒಂದು ರೀತಿ ನೀವು ಬಣ್ಣಿಸಿದ ಹೆಣ್ಣು ಮಕ್ಕಳೇ ಕಾರಣ ಅನ್ನೋದು ನನ್ನ ಭಾವನೆ.

ಸಮಯವಾದಾಗ ನನ್ನ ಬ್ಲೊಗ್ ಕಡೇನು ಬನ್ನಿ.

ಸೀತಾರಾಮ. ಕೆ. / SITARAM.K said...

ಈಗಿನ ಕಾಲದಲ್ಲಿ ಗ೦ಡು-ಹೆ೦ಡತಿ ದುಡಿದು ಹೊರಗೆ ತಿ೦ದುಕೊ೦ಡು ಬರುವ ಪಧ್ಧತಿ ಬರ್ತಾ ಇದೆ. ಸ೦ದ೦ರ್ಭಸೂಕ್ತ ಲೇಖನ. ಇಬ್ಬರೂ ಅಡಿಗೆ ಕಲಿತಿರುವದು ಅವಶ್ಯ ಈಗಿನ ಕಾಲದಲ್ಲಿ. ಹೊರ-ಊಟಕ್ಕಿ೦ತಾ ಮನೆ-ಊಟ ಲೇಸು. ವಿವಿಧ ಅಭಿರುಚಿಯಲ್ಲಿ ತೊಡಗಿಸುವದು ಈತ್ತೀಚಿನ ಟ್ರೆ೦ಡ್-ಆ ಅಬಿರುಚಿಯಲ್ಲಿ ಮನೆಯಡುಗೆಯೂ ಸೇರಲಿ. ಚೆ೦ದದ ಲೇಖನ.

ನಾಗರಾಜ್ .ಕೆ (NRK) said...

My class girls used say, "i can prepare only Tea r Coffee"
(Noodles n every time one ingredient is more r less). if i ask "y dont u try to cook r learn something more ?" they say "there is still more time" (they are all at 23-24 age).
very article sir, i liked it.
n i know coo-king ha ha.

ಜಲನಯನ said...

ಸಾಗರಿ, ಎಂಥ ಸಾಂದರ್ಭಿಕ ಪೋಸ್ಟ್ ನಿಮ್ಮದು..ನಿಜಕ್ಕೂ ಇದು ಟ್ರೆಂಡ್ ಆಗಿದೆ ಅನಿಸುತ್ತೆ...ಸದ್ಯ ಈ ಗಾಳಿ ಹಳ್ಳಿ-ಸಣ್ಣ ಪಟ್ಟಣಗಳ ಕಡೆಗೆ ಸುಳಿದಿಲ್ಲ ಇನ್ನೂ..ಇಲ್ಲ ಅಂದ್ರೆ ಅಡುಗೆ ಮನೆಕೆಲಸ ಮಾಡೋ ಹೆಣ್ಣು ಮಕ್ಕಳೇ ಸಿಗ್ತಿರಲಿಲ್ಲ...ಎಷ್ಟೇ ಮನೆಕೆಲಸದವರಿದ್ದರೂ ನಾವೇ ಮಾಡಿಕೊಳ್ಳುವುದಕ್ಕಿಂತ ಉತ್ತಮವಿಲ್ಲ...ಅಲ್ಲವೇ...ನನ್ನಜ್ಜ ಹೇಳ್ತಿದ್ದದ್ದು ನೆನಪಾಗುತ್ತೆ... ತಾನು ಮಾಡಿದ್ದು ಉತ್ತಮ, ತನ್ನವರು ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು ....ಅಲ್ಲವಾ..?

Manju Bhat said...

Wow.. tumbha chennagi iro sangatiyanna barediddiri.. innondu latest trend enandare halli hudugiyarigella city yalli iro hudugare aagbeku.. illa andre maduve illa antiddare.. mostly illi hotelgalu jaasti anta irbeku..

ಸಾಗರಿ.. said...

ರಮೇಶ್ ಅವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಮಕ್ಕಳಿಗೆ ಅಡಿಗೆಯೊಂದಿಗೆ ಪ್ರತಿ ಕೆಲಸವನ್ನು ಕಲಿಸ ಬೇಕಾದ್ದು ತಂದೆ ತಾಯಿಯರ ಜವಾಬ್ದಾರಿ,, ಅದನ್ನು ನಮ್ಮ ಮಕ್ಕಳನ್ನು ಅತೀಯಾಗಿ ಮುದ್ದಿಸುವ ತಂದೆ ತಾಯಂದಿರು ಮರೆತಂತಿದೆ. ನಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ.

ಸಾಗರಿ.. said...

ಸೀತಾರಾಮ್ ಸರ್,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹಾಗೆಯೇ ಗಂಡವಲಕ್ಕಿ taste ಕೂಡ ಮಜವಾಗಿದೆ, ಈಗಿನ ದಿನದಲ್ಲಂತೂ divorce case ಬಹಳ ಹೆಚ್ಚುತ್ತಿದೆ. ಕೆಲವು caseಗಳಲ್ಲಿ ಅಡಿಗೆ ವಿಷಯವೆ ಮೂಲಕಾರಣವೂ ಆಗಿರುತ್ತದೆ. ನಾವು ಆಧುನಿಕತೆಯ ನೆಪದಲ್ಲಿ ದಾರಿತಪ್ಪುತ್ತಿದ್ದೇವೆ.

ಸಾಗರಿ.. said...

Nagaraj,
even my unmerried friends(girls) says 'boring kitchen', 'I dont know cooking' etc etc. cooking is very basic thing and every one must know how to cook,,, trendy girls only know to enjoy coffee days and mac donaldssssss which is unhealthy. and they always busy in commenting negatively on others cooking style, taste... this is the new trend. and it is already entered into village also...

ಸಾಗರಿ.. said...

ಅಜಾದ್ ಸರ್,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ವಿಪರ್ಯಾಸವೆಂದರೆ ಹಳ್ಳಿಯ ತಾಯಂದಿರ ಬಾಯಲ್ಲೆ ನಾನು ಅಡಿಗೆ ಬರದ ಜಂಬದ ಮಾತನ್ನು ಕೇಳಿದ್ದು.ನಮ್ಮ ಹುಡ್ಗೀರು ರಕ್ಷಣೆಗೆ ಕರಾಟೆ ಕಲೀತಾರೆ ಆದ್ರೆ ಭಕ್ಷಣೆಗೆ ಅಡಿಗೆ ಕಲಿಯಲು ತಯಾರಾಗಲ್ಲ. ಸಮಾನತೆಯ ನೆಪದಲ್ಲಿ ನಾವು ಎಲ್ಲಿಯೋ ಎಡವುತ್ತಿದ್ದೇವೆ. Trend ಎಂಬ ಸಾಂಕ್ರಾಮಿಕ ರೋಗ ನಮ್ಮ ಹಳ್ಳಿ ಹೆಣ್ಣುಮಕ್ಕಳನ್ನೂ ಬಲಿ ಪಡೆಯದಿದ್ದರೆ ಅದೇ ಖುಷಿ.

ಸಾಗರಿ.. said...

:-) :-) :-) ಮಂಜು ಅವರೆ ತಮ್ಮ ಸಂದೇಹ ಸರಿಯೇ ಇರಬೇಕು, ಹಳ್ಳಿಯಲ್ಲಿರುವವರನ್ನು ಮದುವೆ ಆಗಲು ಹುಡುಗಿಯರು ಹಿಂದೇಟು ಹಾಕುತ್ತಿರುವುದು. ಅದಕ್ಕೆ ಅಲ್ಲವೆ ಹವ್ಯಕರಿಗೆ ಹುಡುಗಿಯರ ಕೊರತೆ ಕಾಡುತ್ತಿರುವುದು. ಅಪ್ಪ ಹುಡ್ಕದಾದ್ರೆ ಇಂಜಿನೀಯರ್ರು ಡಾಕ್ಟ್ರೆ ಬೇಕು,, ಓಡಿ ಹೋಪದಾದ್ರೆ ಗಾರೆಯವನೇ ಸಾಕು.. :-). easy and short cut methods..

ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ವನಿತಾ / Vanitha said...

ಕರೆಕ್ಟ್ ಆಗಿ ಹೇಳಿದ್ದೀರಿ..ಈ ಮಾತನ್ನು ನಾನು ಕೂಡ ಕೇಳಿದ್ದೇನೆ..ನನ್ನ ಮಗಳು (ಇನ್ನು ೧ನೆ ಕ್ಲಾಸ್) ಆಗ್ಲೇ ನಂಗೆ ಚಪಾತಿ ಬೇಯಿಸಲು ಹೆಲ್ಪ್ ಮಾಡ್ತಾಳೆ..:)).
(Sitaram Sir avara blog moolaka bande)..Nice blog..

ಸಾಗರಿ.. said...

ವನಿತಾ ಅವರೇ,
ನನ್ನ ಬ್ಲಾಗಿಗೆ ಸ್ವಾಗತ ಮತ್ತು ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ಮಗನನ್ನೂ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ(ಅವನಿಗಿನ್ನೂ ಒಂದೂವರೆ ವರ್ಷ). ಬರುತ್ತಿರಿ.

ತೇಜಸ್ವಿನಿ ಹೆಗಡೆ said...

ಸಾಗರಿ,

ಕೆಲವು ಹೆಣ್ಮಕ್ಕಳಿಗೆ ಅಡಿಗೆ ಅಂದರೆ ಅಸಡ್ಡೆ ಇರುತ್ತದೆ... ತಮ್ಮ ಕ್ವಾಲಿಫಿಕೇಷನ್(?)ಗೆ ಕಡಿಮೆ ಅಡಿಗೆ ಮಾಡುವುದೆಂದರೆ ಎಂದೇ ನಂಬಿರುತ್ತಾರೆ... ದೊಡ್ಡವರೂ ನಂಬಿಸಿರುತ್ತಾರೆ. ಅಂತಹವರ ಬಗ್ಗೆ ಕರುಣೆಬರುತ್ತದೆ. ಆದರೆ ಕೆಲವು ಹೆಣ್ಮಕ್ಕಳಿಗೆ ಅಡಿಗೆ ಮಾಡುವುದರ ಬಗ್ಗೆ ಆಸಕ್ತಿ ಇದ್ದರೂ ಅವಕಾಶವಿಲ್ಲದಂತಾಗಿರುತ್ತದೆ. ಅಂತಹವರು ಅವಕಾಶ ಮಾಡಿಕೊಂಡಾದರೂ ಮುಂದೆ ಕಲಿಯುತ್ತಾರೆ. ಆದರೆ ಇಲ್ಲಿ ದೊಡ್ಡವರ ಪಾತ್ರ ಮಾತ್ರ ಮಹತ್ತರವಾದುದು. ಯಥಾ ರಾಜ ತಥಾ ಪ್ರಜಾ. ಹೆತ್ತವರು ಕೊಡುವ ಸಂಸ್ಕಾರವೇ ಅವರ ಭವಿಷ್ಯತ್ತಿಗೆ ಬುನಾದಿ.

ಉತ್ತಮ, ಚಿಂತನಶೀಲ ಲೇಖನ. ಚೆನ್ನಾಗಿದೆ.

ಸಾಗರಿ.. said...

ತೇಜಸ್ವಿನಿಯವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹೌದು, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕೋಮಲವಾಗಿ ಬೆಳೆಸಲು ಪೈಪೋಟಿಯೇ ನಡೆದಿದೆ. ಚೆನ್ನಾಗಿ ಸಾಕುವ ನೆಪದಲ್ಲಿ ಪಾಲಕರು ಮಕ್ಕಳನ್ನು ಸುಮಾರಾಗಿಯೇ ಅವಲಂಬಿಗಳನ್ನಾಗಿ ಮಾಡುತ್ತಾರೆ. ಇದು ನಮ್ಮ ಊರ ಕಡೆ ಸ್ವಲ್ಪ ಅತಿಯಾಗಿಯೇ ಹಬ್ಬುತ್ತಿದೆ ಅಲ್ಲವೇ?.

ಯಜ್ಞೇಶ್ (yajnesh) said...

ಈಗಿನ ನೈಜ ಚಿತ್ರಣವನ್ನು ತುಂಬಾ ಚೆನ್ನಾಗಿ ಬರದ್ದಿ.

ಹಿಂದೆಲ್ಲಾ ಗಂಡಸಿಗೆ ಇಂತಹ ಕೆಲಸ, ಹೆಂಗಸರಿಗೆ ಇಂತಹ ಕೆಲಸ ಅಂತ ಇತ್ತು. ತಮ್ಮ ತಮ್ಮ ಕೆಲಸದಲ್ಲಿ ಅವರವರು ಇರ್ತಾಯಿದ್ದರು. ಈಗ ಯಾರು ಯಾವ ಕೆಲಸ ಬೇಕಾದರು ಮಾಡಬಹುದು. ಸೋ ಮುಂದೊಂದ್ ದಿನ ಗಂಡ್ಸು ಅಡಿಗೆ ಮಾಡೋದು, ಹೆಂಗ್ಸು ಕೆಲ್ಸ ಮಾಡೋದು ಬಂದ್ರೂ ಬಂತು :(

ಹವ್ಯಕರಿಗಂತೂ ಇಂಜಿನಿಯರ್ ಮತ್ತು ಡಾಕ್ಟ್ರು ಬಿಟ್ರೆ ಬೇರೆ ಕೆಲ್ಸನೇ ಕಾಣಿಸ್ತಲ್ಲೆ...