Wednesday, February 24, 2010

ಒಂದು ಭೂಮಿಗೀತೆ









ಅವಳು ಭೂಮಿ...


















ಆಗಸವು ಮೈನೆರೆಯದಿರೆ
ಬಂಜೆ ಎಂದರು ಅವಳ
ಬಿಸಿಯ ಬೇಗೆಯಲಿ
ಮಿಂದವಳ ಗಾಯಕ್ಕೆ ಉಪ್ಪನೆರಚುತಿಹರು.

ಕೊಳ್ಳಿ ಇಟ್ಟರು ಎದೆಗೆ
ಹೊತ್ತಿತದೋ ಕರುಳ ಕೂಸು,
ಕಂಗೆಟ್ಟ ಹೆಂಗಡಲು
ಬಾಯ್ತೆರೆದ ಬೊಬ್ಬೆಗೆ
ಹುರುಪೆದ್ದ ಸಿಪ್ಪೆಯೇ ಕನಿಕರಿಸಿತು.

ಅರ್ಚಕನ ಅಮಲಿಗೆ
ಬಲಿಯಾದ ಭಗವಂತ
ಇನ್ನೆಲ್ಲಿ ಭಕ್ತಿಗೆ-ಭಾವಕ್ಕೆ ಬೆಲೆ?
ಅವರಿವರ ಆಸೆಗೆ
ಸುಡುತಿಹ ಜೀವವನು
ತೆತ್ತ ಅವಳ ಆಹುತಿಗೆ ಸೆಲೆ?

ಯಾರ ಬೆನ್ನು ಬಿಟ್ಟಿದೆ
ಅವರವರ ಪಾಪ,,,
ಅನುಭವಿಸದಿರೆ ಕೂಡಿಟ್ಟ ಕರ್ಮವನು
ಜಗಕೆ ತೃಪ್ತಿಯಿಲ್ಲ..
ಇಂದಲ್ಲ ಬರುವೆ ನಾಳೆ
ಎಂದ ಆತಂಕವನು ಮರೆತು
ಮೈಮರೆತ ಮನುಜಗಿನ್ನು ಸುಖವಿಲ್ಲ.

ಬಾಯ್ತೆರೆದು ಒಮ್ಮೆಲೇ
ಸಮಸ್ತವನೂ ನುಂಗುವ ಯೋಚನೆ
ಹಾಯ್ದಿರಲೂಬಹುದು ಅವಳ ಕಣ್ಣಂಚಿಗೆ,
ಬದುಕಿದ್ದು ಸಾಕು ನಡೆ ಗರ್ಭಕೆನಲು
ಸೀತಾ-ರಾಮರಿಲ್ಲೆಲ್ಲಿ,, ಇರುವವರೆಲ್ಲರೂ ರಾವಣರೇ
ಎನ್ನಿಸಿದ್ದಿರಬಹುದು ಆಕೆಗೆ.

ಮೈ ಜಾರಿದ ಶಿಶುವಿಗಳುತ್ತ ಕೂತವಳಲ್ಲ,
ನಾಳೆ ತನ್ನದೇ ಎಂದವಳು ಮರೆತಂತಿಲ್ಲ.
ಹಾರುತಿಹ ಉಸಿರನ್ನು ಹಿಡಿದಿಟ್ಟು ಅಂಗೈಲಿ
ಸತ್ಯನರ್ತನಕವಳು ಕಾ...ಯು...ತಿ...ಹ...ಳು.......

0 comments: