Tuesday, August 31, 2010

ಸಾಗರದ ಹನಿಗಳು.



1.ತೆರೆ(ಅಲೆ) ಮರೆಯ ಮಾತು

ಅಲೆಗಳ ಬಳುಕಲ್ಲಿ
ಮಲೆಗಳ ನೆನಪಲ್ಲಿ
ತನದೇ ಹೆಜ್ಜೆಯನರಸುವ
ನದಿಗಳ ಕಳವಳ, ಕಲರವವೆಲ್ಲ
ಭೋರ್ಗರೆದು
ನೊರೆ ನೊರೆಯ ತೆರೆಯಾಗಿ
ಹಿಂದೆ ಮುಂದಾಡಿ ಸ್ತಬ್ಧವಾಗುವವು.



2.ಸಂಗಮ

ನದಿಯು ತನ್ನ ಸಿಹಿಯ ನೀಡಿ
ಕಡಲ ಉಪ್ಪ ತಾನು ಹೀರಿ
ಒಬ್ಬರಲ್ಲೊಬ್ಬರು ಅಭೇದ್ಯವಾಗಿ ಕರಡಿ
ಪ್ರಕೃತಿಯ ಲೇಣ-ದೇಣ
ವ್ಯವಹಾರದ ಕೂಡಿಕೆಯ ಬಿಂದುವಲ್ಲಿ
ಸಂಧಿಸುತ್ತಾರೆ.


3.ಬೆಸ್ತ

ಹೆಣೆದ
ಬಲೆಯಲ್ಲಿ
ಬದುಕ ಹಿಡಿವಾತ..

14 comments:

ಅಪ್ಪ-ಅಮ್ಮ(Appa-Amma) said...

ಸಾಗರಿಯವರೇ,

ಹನಿಗಳು ಹಿತವಾಗಿ ಬಿದ್ದಿವೆ !
ಧನ್ಯವಾದಗಳು

Subrahmanya said...

ಓಹ್ !. ಬಹಳ ಚೆನ್ನಾಗಿದೆ. ಹನಿ-ಹನಿಯಾಗಿ.....

ಮನಮುಕ್ತಾ said...

ಸಿಹಿಸಿಹಿಯಾದ ಹನಿಗಳು..
ಉದುರಿದೆ ಮುದ್ದು ಅಕ್ಷರಗಳಲ್ಲಿ...ಚೆನ್ನಾಗಿವೆ.

sunaath said...

"ಹೆಣೆದ ಬಲೆಯಲ್ಲಿ
ಬದುಕ ಹಿಡಿವಾತ"
--ತುಂಬ ಸುಂದರವಾದ ಸಾಲುಗಳು.

Badarinath Palavalli said...

nice one :-)
thanks for visiting my blog

ದಿನಕರ ಮೊಗೇರ said...

ಸಾಗರಿ ಮೇಡಮ್,
ಮೂರು ಹನಿಗಳು ಚೆನ್ನಾಗಿವೆ..... ಕೊನೆಯದು ಸುಪ್ಪರ್.....

Dr.D.T.Krishna Murthy. said...

ಸುಂದರ ಹನಿಗಳು.ಕೊನೆಯ ಹನಿ ಅದ್ಭುತ !

ಸೀತಾರಾಮ. ಕೆ. / SITARAM.K said...

ಚೆಂದದ ಚುಟುಕುಗಳು. ಮೊದಲೆನೆಯದು ಮಾರ್ಮಿಕವಾಗಿದೆ. ಸಂಗಮದ ಲೇಣ-ದೇಣ ಅದ್ಭುತ ಹೋಲಿಕೆ ಮತ್ತು ಕೊನೆಯದು ಸರಳ ಸುಂದರ ಅರ್ಥದ್ದು.

ಸಾಗರದಾಚೆಯ ಇಂಚರ said...

ಸಾಗರಿ

ಹಿತವಾದ ಸುಂದರ ಹನಿಗಳು

ತೇಜಸ್ವಿನಿ ಹೆಗಡೆ said...

ಹನಿ ಹನಿ ಸೇರಿಯೇ ನದಿಯಾಗಿದ್ದು... ಹಲವು ನದಿಗಳು ಸೇರಿಯೇ ಸಾಗರವಾಗಿದ್ದು! ತುಂಬಾ ಇಷ್ಟವಾಯಿತು ನಿಮ್ಮ ಹನಿಗಳು.

ಮನಸಿನಮನೆಯವನು said...

"ಹೆಣೆದ ಬಲೆಯಲ್ಲಿ
ಬದುಕ ಹಿಡಿವಾತ"
ಈ ಸಾಲುಗಳು ಅದ್ಭುತ..

V.R.BHAT said...

ಹನಿಗಳು ಮಂಜನ್ನೂ ಮಂಜ ನೆನಪನ್ನೂ ಆ ಹಿತಕರ ವಾತಾವರಣವನ್ನೂ ಸೃಷ್ಟಿಸಿದವು, ಚೆನ್ನಾಗಿವೆ!

ಸಾಗರಿ.. said...

ಅಪ್ಪ-ಅಮ್ಮ ಅವರೇ,,
ಶಂಭುಲಿಂಗ ಅವರೇ,
ಮನಮುಕ್ತಾ ಅವರೇ,
ಕಾಕಾ,
ಬದ್ರಿನಾಥ್ ಅವರೆ,
ದಿನಕರ್ ಅವರೆ,
ಕೃಷ್ಣಮೂರ್ತಿಯವರೆ,
ಸೀತಾರಾಮ್ ಅವರೇ,
ವಸಂತ್ ಅವರೆ,
ಗುರು ಅವರೆ,
ತೇಜಸ್ವಿನಿಯವರೆ,
ಕತ್ತಲೆ ಮನೆಯವರೆ
ವಿ.ಆರ್.ಭಟ್ ಅವರೆ,

ನನ್ನ ಹನಿಗಳನ್ನು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು..

KalavathiMadhusudan said...

saagariyavare,arthapoornavaada hanigalu.abhinandanegalu.